29 ಸಾವಿರ ಹೊಸ ಟವರ್ ಸ್ಥಾಪನೆ; ಸಂಪರ್ಕ ರಹಿತ ಗ್ರಾಮ 56 ಸಾವಿರ

ಕಾಲ್‍ಡ್ರಾಪ್ ಸಮಸ್ಯೆಯನ್ನು ನಿವಾರಿಸಬೇ ಕೆಂದು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರಿಂದ ಖಾಸಗಿ ದೂರಸಂಪರ್ಕ ಸೇವಾ ಕಂಪನಿಗಳು ದೇಶಾದ್ಯಂತ 29,000 ಹೊಸ ಟವರ್‍ಗಳನ್ನು ಸ್ಥಾಪಿಸಿವೆ..
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ (ಸಂಗ್ರಹ ಚಿತ್ರ)
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ (ಸಂಗ್ರಹ ಚಿತ್ರ)

ನವದೆಹಲಿ: ಕಾಲ್‍ಡ್ರಾಪ್ ಸಮಸ್ಯೆಯನ್ನು ನಿವಾರಿಸಬೇ ಕೆಂದು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರಿಂದ ಖಾಸಗಿ ದೂರಸಂಪರ್ಕ ಸೇವಾ ಕಂಪನಿಗಳು ದೇಶಾದ್ಯಂತ  29,000 ಹೊಸ ಟವರ್‍ಗಳನ್ನು ಸ್ಥಾಪಿಸಿವೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ಕಾಲ್‍ಡ್ರಾಪ್ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ  ನೀಡಿದ  ನಂತರ  ಕಠಿಣ ಕ್ರಮಗಳನ್ನು ಜರುಗಿಸುವ ಕುರಿತು ಕಂಪನಿಗಳಿಗೆ ಎಚ್ಚರಿಕೆ ನೀಡಲಾಯಿತು. ಇದರ ನಂತರದಲ್ಲಿ  ಕಂಪನಿಗಳು ಹೆಚ್ಚಿನ ಟವರ್‍ಗಳನ್ನು ಸ್ಥಾಪಿಸಿವೆ ಎಂದು ತಿಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಹ ದೇಶಾದ್ಯಂತ 4,500 ಟವರ್ ನಿರ್ಮಿಸಿದೆ.

ಸಂಪರ್ಕವಿಲ್ಲದ ಹಳ್ಳಿಗಳು:
ದೇಶದಲ್ಲಿ ಇನ್ನೂ 55,669 ಹಳ್ಳಿಗಳು ಮೊಬೈಲ್ ದೂರಸಂಪರ್ಕದಿಂದ ವಂಚಿತವಾಗಿವೆ ಎಂದು ರವಿಶಂಕರ್ ಪ್ರಸಾದ್ ಲೋಕಸಭೆಗೆ ತಿಳಿಸಿದ್ದಾರೆ. ನಗರದ  ಪ್ರದೇಶದಲ್ಲಿ ದೂರಸಂಪರ್ಕ ದಟ್ಟಣೆ ಶೇ.152.36ರಷ್ಟಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಶೇ.48. 79 ರಷ್ಟಿದೆ ಎಂದು ಹೇಳಿದ್ದಾರೆ. ದೇ ಶದ ಲ್ಲಿನ  5,97,608 ಗ್ರಾಮಗಳ ಪೈಕಿ 5,41,939  ಗ್ರಾಮಗಳು ಮೊಬೈಲ್ ಸೇವೆ ವ್ಯಾಪ್ತಿಗೆ ತರಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com