
ಗುರ್ ಗಾಂವ್: ಹಾಡಹಗಲೇ ಕಿಡ್ನಾಪ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದ ಗುರ್ ಗಾಂವ್ ಅಪಹರಣ ಪ್ರಕರಣ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಕೆಲವೇ ಗಂಟೆಗಳ ಅವಧಿಯಲ್ಲಿ ಸುಖಾಂತ್ಯ ಕಂಡಿದೆ.
ಇಂದು ಬೆಳಗ್ಗೆ ಸುಮಾರು 9.30ರ ವೇಳೆಗೆ ಗುರ್ ಗಾಂವ್ ನ ಸೆಕ್ಟರ್ 4 ರ ಸಮೀಪದ ದ್ರೋಣಾಚಾರ್ಯ ಕಾಲೇಜು ಬಳಿ ಯುವತಿಯನ್ನು ಅಪಹರಿಸಲಾಗಿತ್ತು. ಸಂಖ್ಯಾ ಫಲಕವಿಲ್ಲದ ಬಿಳಿಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಇಬ್ಬರು ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿದ್ದರು. ಕೂಡಲೇ ಎಚ್ಚೆತ್ತ ಗುರ್ ಗಾಂವ್ ಪೊಲೀಸರು ಕಾರ್ಯಾಚರಣೆಗೆ ಮುಂದಾದರು. ಕೂಡಲೇ ಸೆಕ್ಟರ್ 4 ಮತ್ತು 7ರ ರಸ್ತೆಯನ್ನು ಮುಚ್ಚಿ, ಇಬ್ಬರು ಪೊಲೀಸರು ಕಾರಿಗಾಗಿ ಕಾದು ಕುಳಿತರು. ಇತ್ತ ಪೊಲೀಸರ ಕಾರ್ಯಾಚರಣೆ ವಿಚಾರ ತಿಳಿದ ದುಷ್ಕರ್ಮಿಗಳು ಯುವತಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಪ್ರಸ್ತುತ ಯುವತಿ ಸುರಕ್ಷಿತವಾಗಿದ್ದು, ಅಪಹರಣ ಮಾಡಿದ ದುಷ್ಕರ್ಮಿಗಳು ಯುವತಿಗೆ ಪರಿಚಿತರೆಂದು ಹೇಳಲಾಗುತ್ತಿದೆ. ಪೊಲೀಸರು ಕೂಡ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ದುಷ್ಕರ್ಮಿಗಳನ್ನು ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement