ನೆಹರೂ ನೀತಿ ಬಗ್ಗೆ ಟೀಕೆ: ಕಾಂಗ್ರೆಸ್ ಮುಖವಾಣಿ ಕಂಟೆಂಟ್ ಎಡಿಟರ್ ವಜಾ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಟೀಕಿಸಿದ್ದ ಕಾಂಗ್ರೆಸ್...
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಟೀಕಿಸಿದ್ದ ಕಾಂಗ್ರೆಸ್ ಮುಖವಾಣಿಯ ಕಂಟೆಂಟ್ ಎಡಿಟರ್ ಅನ್ನು ಸೋಮವಾರ ವಜಾಗೊಳಿಸಲಾಗಿದೆ.
ವರದಿಗಳ ಪ್ರಕಾರ, ವಿವಾದಾತ್ಮಕ ಲೇಖನ ಪ್ರಕಟಿಸಿದ್ದಕ್ಕಾಗಿ ಕಾಂಗ್ರೆಸ್ ತನ್ನ ಮುಖವಾಣಿಯ ಕಂಟೆಂಟ್ ಎಡಿಟರ್ ಸುಧೀರ್ ಜೋಶಿ ಅವರನ್ನು ವಜಾಗೊಳಿಸಿದೆ.
ಇಂದು ಕಾಂಗ್ರೆಸ್ 131ನೇ ಸಂಸ್ಥಾಪನಾ ದಿನ ಆಚರಿಸುತ್ತಿರುವ ಹೊತ್ತಿನಲ್ಲೇ ಪಕ್ಷದ ಮುಖವಾಣಿಯಲ್ಲಿ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಬಗ್ಗೆ ಟೀಕೆ ವ್ಯಕ್ತವಾಗಿದೆ.  ಮಹಾರಾಷ್ಟ್ರದಿಂದ ಪ್ರಕಟಿಸಲ್ಪಡುವ ಕಾಂಗ್ರೆಸ್ ಪಕ್ಷದ ಮುಖವಾಣಿ ಕಾಂಗ್ರೆಸ್ ದರ್ಶನ್‌ನ ಡಿಸೆಂಬರ್ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ. ಈ ಲೇಖನದಲ್ಲಿ ಸೋನಿಯಾ ಗಾಂಧಿಯವರ ಅಪ್ಪ ಇಟೆಲಿಯ ಫ್ಯಾಸಿಸ್ಟ್ ಸೇನೆಯ ಸದಸ್ಯರಾಗಿದ್ದರು ಎಂದು ಹೇಳಲಾಗಿದೆ.
ಇದೇ ಸಂಚಿಕೆಯಲ್ಲಿ ಪ್ರಕಟವಾದ ಇನ್ನೊಂದು ಲೇಖನದಲ್ಲಿ ನೆಹರೂ ನೀತಿಯನ್ನು ಪ್ರಶ್ನಿಸಲಾಗಿದೆ. ಅಂದರೆ ಕಾಶ್ಮೀರದ ಸಮಸ್ಯೆ ಎದುರಾದಾಗ ನೆಹರೂ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮಾತನ್ನು ಕೇಳಿದ್ದರೆ, ಅದರ ಕಥೆಯೇ ಬೇರೆಯಾಗುತ್ತಿತ್ತು ಎಂದು ಹೇಳಲಾಗಿದೆ. 
ಕಾಂಗ್ರೆಸ್ ಬಗ್ಗೆಯೇ ಟೀಕೆ ಮಾಡಿರುವ ಕಾಂಗ್ರೆಸ್ ಮುಖವಾಣಿ ವಿರುದ್ಧ ಕಾಂಗ್ರೆಸ್ಸಿಗರು ತೀವ್ರ ಗರಂ ಆಗಿದ್ದು, 'ಕಾಂಗ್ರೆಸ್ ದರ್ಶನ್‌'ನದ  ಸಂಪಾದಕ ಹಿರಿಯ ಕಾಂಗ್ರೆಸ್ ನೇತಾರ ಸಂಜಯ್ ನಿರುಪಮ್ ವಿರುದ್ಧ ಟೀಕಾ ಪ್ರಹಾರ ಶುರುವಾಗಿದೆ.
ಇತ್ತ ಸಂಜಯ್ ಅವರು ನಾನು ಪತ್ರಿಕೆಯ ದಿನ ನಿತ್ಯದ ಕಾರ್ಯಗಳ ಮೇಲೆ ನಿಗಾ ಇಟ್ಟಿಲ್ಲ ಎಂದಿದ್ದಾರೆ. ಅದೇ ವೇಳೆ ಈ ತಪ್ಪಿಗೆ ಕ್ಷಮೆಯಾಚಿಸಿದ ಅವರು, ಈ ಲೇಖನ ಬರೆದ ಸಂಪಾದಕೀಯ ತಂಡದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com