
ಗುರ್ ಗಾಂವ್: ಹಾಡಹಗಲೇ ಕಾಲೇಜು ಯುವತಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ಹರ್ಯಾಣದಲ್ಲಿ ನಡೆದಿದ್ದು, ಅಪಹರಣದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹರ್ಯಾಣದ ಗುರ್ ಗಾಂವ್ ಜಿಲ್ಲೆಯಲ್ಲಿ ನಡೆದಿದ್ದು, ಯುವತಿ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಗೇಟ್ ಬಳಿಯಲ್ಲಿಯೇ ಆಕೆಯನ್ನು ಅಪಹರಣ ಮಾಡಲಾಗಿದೆ. ಸಂಖ್ಯಾಫಲಕ (ನಂಬರ್ ಬೋರ್ಡ್) ಇಲ್ಲದೆ ಕಾರು ಯುವತಿಯನ್ನು ಅಪಹರಣ ಮಾಡಿದ್ದು, ಸುತ್ತಮುತ್ತ ಸಾಕಷ್ಟು ಜನರು ಇರುವಾಗಲೇ ಈ ಘಟನೆ ನಡೆದಿದೆ. ಯುವತಿಯನ್ನು ಕಾರಿನಲ್ಲಿ ಬಲವಂತವಾಗಿ ಹತ್ತಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಕಾರನ್ನು ಅಡ್ಡಗಟ್ಟಲು ಮುಂದಾದರು. ಆದರೆ ಅಷ್ಟರಲ್ಲಿಯೇ ದುಷ್ಕರ್ಮಿಗಳು ಆಕೆಯನ್ನು ಹೊತ್ತು ವೇಗವಾಗಿ ಹೊರಟುಹೋದರು.
ಅಪಹರಣ ವೇಳೆ ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನಿಸದಳಾದರೂ, ಕಾರಿನಲ್ಲಿ ಕುಳಿತಿದ್ದ ದುಷ್ಕರ್ಮಿಯೊಬ್ಬ ಆಕೆಯನ್ನು ಬಲವಾಗಿ ಹಿಡಿದುಕೊಂಡು ಒಳಗೆ ಎಳೆದುಕೊಂಡಿದ್ದ. ಪ್ರತ್ಯಕ್ಷದರ್ಶಿಗಳು ತಿಳಿಸಿರುವಂತೆ ಬಿಳಿ ಬಣ್ಣದ ಕಾರಿನಲ್ಲಿ ಯುವತಿಯನ್ನು ಅಪಹರಣ ಮಾಡಲಾಗಿದ್ದು, ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಇದ್ದರು ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement