'ಕೈ' ಐತಿಹಾಸಿಕ ಸತ್ಯಗಳನ್ನುಒಪ್ಪಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ: ಜಿತೇಂದ್ರ ಸಿಂಗ್

ಸರ್ದಾರ್ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಿರುವ ಕಾಂಗ್ರೆಸ್ ಪಕ್ಷ ಐತಿಹಾಸಿಕ ಸತ್ಯಗಳನ್ನು ಒಪ್ಪಿಕೊಂಡಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸಚಿವ ಜಿತೇಂದ್ರ ಸಿಂಗ್
ಸಚಿವ ಜಿತೇಂದ್ರ ಸಿಂಗ್

ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖವಾಣಿ ನೆಹರೂ ಬಗ್ಗೆ ಟೀಕಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಸರ್ದಾರ್ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಿರುವ ಕಾಂಗ್ರೆಸ್ ಪಕ್ಷ ಐತಿಹಾಸಿಕ ಸತ್ಯಗಳನ್ನು ಒಪ್ಪಿಕೊಂಡಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ.
ಕಾಶ್ಮೀರದ ಸಮಸ್ಯೆ ಎದುರಾದಾಗ ನೆಹರೂ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮಾತನ್ನು ಕೇಳಿದ್ದರೆ, ಅದರ ಕಥೆಯೇ ಬೇರೆಯಾಗುತ್ತಿತ್ತು ಎಂದು ಕಾಂಗ್ರೆಸ್ ಮುಖವಾಣಿ ನೆಹರೂ ನೀತಿಗಳನ್ನು ಟೀಕಿಸಿತ್ತು.  ಇದನ್ನು ಐತಿಹಾಸಿಕ ಸತ್ಯ ಎಂದು ಹೇಳಿರುವ ಜಿತೇಂದ್ರ ಸಿಂಗ್, ಕಾಂಗ್ರೆಸ್ ಐತಿಹಾಸಿಕ ಸತ್ಯಗಳನ್ನು ಒಪ್ಪಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
 ನೆಹರೂ ಕಾಶ್ಮೀರ ವಿಷಯದಲ್ಲಿ ಪಟೇಲರ ಮಾತನ್ನು ಕೇಳಬೇಕಿತ್ತು ಎಂದು ಕಳೆದ ಅರ್ಧ ಶತಮಾನಗಳಿಂದ ಬಿಜೆಪಿ ಹೇಳುತ್ತಿದ್ದ ವಿಷಯವನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com