ಮುಂಬೈ: ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿರುವ ಎನ್‌ಡಿಎ ಮಿತ್ರ ಪಕ್ಷ ಶಿವಸೇನೆ, ಪಾಕಿಸ್ತಾನಕ್ಕೆ ಆಪ್ತರಾಗುವವರು ರಾಜಕೀಯದಲ್ಲಿ ಬಹಳ ದಿನ ಉಳಿಯುವುದಿಲ್ಲ. ಇದಕ್ಕೆ ಬಿಜೆಪಿ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ.ಆಡ್ವಾಣಿ ಅವರರೇ ಜೀವಂತ ಸಾಕ್ಷಿ ಎಂದಿದೆ.