ಸತತ 5ನೇ ಬಾರಿಗೆ ಗಿನ್ನೆಸ್ ವಿಶ್ವದಾಖಲೆ ಸೇರಿದ ರಾಜಮಂಡ್ರಿ ‘ಲಡ್ಡು’

ಕಳೆದ ಗಣೇಶ ಹಬ್ಬದ ನಿಮಿತ್ತ ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ಲಡ್ಡು ಈ ಬಾರಿಯೂ ಗಿನ್ನೆಸ್ ವಿಶ್ವದಾಖಲೆ ಪಟ್ಟಿಗೆ ಸೇರಿದೆ...
8 ಸಾವಿರ ಕೆಜಿ ತೂಕದ ಬೃಹತ್ ರಾಮಜಮಂಡ್ರಿ ಲಡ್ಡು (ಸಂಗ್ರಹ ಚಿತ್ರ)
8 ಸಾವಿರ ಕೆಜಿ ತೂಕದ ಬೃಹತ್ ರಾಮಜಮಂಡ್ರಿ ಲಡ್ಡು (ಸಂಗ್ರಹ ಚಿತ್ರ)

ರಾಜಮಂಡ್ರಿ: ಕಳೆದ ಗಣೇಶ ಹಬ್ಬದ ನಿಮಿತ್ತ ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ಲಡ್ಡು ಈ ಬಾರಿಯೂ ಗಿನ್ನೆಸ್ ವಿಶ್ವದಾಖಲೆ ಪಟ್ಟಿಗೆ ಸೇರಿದೆ.

ಪ್ರತೀ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಆಂಧ್ರಪ್ರದೇಶದ ವಿವಿಧೆಡೆ ಬೃಹತ್ ಲಡ್ಡು ನಿರ್ಮಿಸುವ ಕಾರ್ಯ ಕಳೆದ ಹಲವು ವರ್ಷಗಳಿಂದ ನಡೆದು ಬಂದಿದೆ. ಈ ಬಾರಿಯೂ ಆಂಧ್ರ ಪ್ರದೇಶದ  ವಿಶಾಖಪಟ್ಟಣಂ, ಹೈದರಾಬಾದ್ ಮತ್ತು ರಾಜಮಂಡ್ರಿಯಲ್ಲಿ ಬೃಹತ್ ಲಡ್ಡುಗಳನ್ನು ನಿರ್ಮಿಸಲಾಗಿತ್ತು. ಈ ಪೈಕಿ ಸುಮಾರು 8000 ಕೆಜಿ ತೂಗುತ್ತಿದ್ದ ರಾಜಮಂಡ್ರಿ ಲಡ್ಡುವಿಗೆ ಗಿನ್ನೆಸ್ ವಿಶ್ವ  ದಾಖಲೆಯ ಮನ್ನಣೆ ದೊರೆತಿದೆ.

ಅತಿದೊಡ್ಡ ಸಿಹಿತಿಂಡಿ ವಿಭಾಗದಲ್ಲಿ ರಾಜಮಂಡ್ರಿ ಲಡ್ಡು ಸತತ 5ನೇ ವರ್ಷವೂ ದಾಖಲೆ ಪಟ್ಟಿ ಸೇರುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದೆ. ಈ ಬೃಹತ್ ಲಡ್ಡುವನ್ನು ಶ್ರೀ ಭಕ್ತ  ಆಂಜನೇಯ ಸ್ವೀಟ್ಸ್ ಸಂಸ್ಥೆ ನಿರ್ಮಿಸಿದ್ದು, ಸತತ ಐದನೇ ಬಾರಿಗೆ ಈ ಸಂಸ್ಥೆಯ ಲಡ್ಡು ವಿಶ್ವದಾಖಲೆ ಪಟ್ಟಿಗೆ ಸೇರಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಂಸ್ಥೆಯ ಮಾಲೀಕ ಎಸ್.ವೆಂಕಟೇಶ್ವರ ರಾವ್ ಅವರು, ತಮ್ಮ ಅಂಗಡಿಯ ಕೆಲಸಗಾರರ ಶ್ರಮ, ಗಣೇಶ ಕೃಪೆ ಮತ್ತು ಜನರ ಬೆಂಬಲದಿಂದ 5ನೇ ಬಾರಿಗೆ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

"ವಿಶಾಖಪಟ್ಟಣದಲ್ಲಿ 8 ಸಾವಿರ ಕೆ ಜಿ ತೂಕದ ಮತ್ತು ವಿಜಯವಾಡದಲ್ಲಿ 6 ಸಾವಿರ ಕೆ ಜಿ ತೂಕದ ಲಾಡುಗಳನ್ನು ಪ್ರತ್ಯೇಕವಾಗಿ ನಿರ್ವಿುಸಿದ್ದೆವು. ತಮ್ಮ ಮುಂದಿನ ಗುರಿ 500 ಕೆ ಜಿ ತೂಕದ  ಕೋವಾ (ಹಾಲು ಮಿಶ್ರಿತ ಸಿಹಿ ತಿಂಡಿ) ಶಿರಡಿ ಸಾಯಿಬಾಬಾಗೆ ತಯಾರಿಸಲಾಗುವುದು ಎಂದು ಎಸ್.ವೆಂಕಟೇಶ್ವರ ರಾವ್ ತಿಳಿಸಿದ್ದಾರೆ. ಈ ಹಿಂದೆಯೂ ಕೂಡ ತಾಪೇಶ್ವರಮ್ ಅವರ ಶ್ರೀ ಭಕ್ತ ಆಂಜನೇಯ ಸ್ವೀಟ್ಸ್ ಸಂಸ್ಥೆ 2011ರಲ್ಲಿ 5,570 ಕೆಜಿ, 2012ರಲ್ಲಿ 6,599ಕೆಜಿ, 2013ರಲ್ಲಿ 7,132 ಕೆಜಿ ಮತ್ತು 2014ರಲ್ಲಿ 7,858 ಕೆಜಿ ತೂಕದ ಲಡ್ಡುಗಳನ್ನು ನಿರ್ಮಿಸಿ ಗಿನ್ನೆಸ್ ದಾಖಲೆ ಬರೆದಿತ್ತು. ಇದೀಗ  ತನ್ನದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com