ಪಶ್ಚಿಮ ದೆಹಲಿಯ ನಂಗೋಲಯ್ ಪ್ರದೇಶದಲ್ಲಿ ಗೆಟ್ ಟುಗೆದರ್‌ಗೆ ಹೋಗಿ ಬರುತ್ತೇನೆ ಎಂದು ಧೀರೇಂದ್ರ ಅವರು ಭಾನುವಾರ ಮನೆಯಿಂದ ಹೊರಟಿದ್ದರು. ನಾಪತ್ತೆಯಾದ ಅವರಿಗೆ ಶೋಧ ನಡೆಸಿದಾಗ ಮನೆಯ ಹತ್ತಿರದ ಕೆಸರು ಪ್ರದೇಶವೊಂದರಲ್ಲಿ ಶವ ಪತ್ತೆಯಾಗಿದೆ. ಧೀರೇಂದ್ರ ಅವರ ಮೇಲೆ ಹಲವಾರು ಬಾರಿ ಕತ್ತಿಯಿಂದ ಚುಚ್ಚಲಾಗಿದ್ದು, ಮರ್ಮಾಂಗವನ್ನು ಕತ್ತರಿಸಲಾಗಿದೆ. ಅವರ ಮುಖದ ಮೇಲೆ ಭಾರವಾದ ವಸ್ತು ಎತ್ತಿ ಹಾಕಿ ಮುಖವನ್ನು ನಜ್ಜುಗುಜ್ಜು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.