ವೈಶಾಲಿ: ಬಿಹಾರ್‌ನಲ್ಲಿ ಇಬ್ಬರು ಇಂಜಿನಿಯರ್‌ಗಳ ಹತ್ಯೆಯ ನಂತರ ಇದೀಗ ಮತ್ತೊಬ್ಬ ಯುವ ಇಂಜಿನಿಯರ್‌ನ ಶವ ಸೋಮವಾರ ಪತ್ತೆಯಾಗಿದೆ.
ರಿಲಯನ್ಸ್ ಟೆಲಿಕಾಂನಲ್ಲಿ ಕ್ವಾಲಿಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅಂಕಿತ್ ಜಾ ಎಂಬ ಯುವಕ ಮೃತದೇಹ ವೈಶಾಲಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಈತನ ಕತ್ತು ಸೀಳಿ ಕೊಲೆಗೈಯ್ಯಲಾಗಿದ್ದು, ಮತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಭಾನುವಾರ ರಾತ್ರಿ ಕೆಲಸಕ್ಕೆಂದು ಅಂಕಿತ್ ಮನೆ ಬಿಟ್ಟಿದ್ದನು ಎಂದು ಅಂಕಿತ್ ಸಹೋದರ ಹೇಳಿದ್ದಾನೆ.
ಕಂಪನಿಯ ಕಾರು ಹೊರಗೆ ಕಾಯುತ್ತಿದೆ ಎಂದು ಹೇಳಿ ಆತ ಮನೆಯಿಂದ ಹೊರಗೆ ಹೋಗಿದ್ದ. ಅದೇನೋ ಕಚೇರಿ ಕೆಲಸವಿರಬಹುದು ಎಂದು ನಾನು ಅಂದುಕೊಂಡೆ. ಬೆಳಗ್ಗೆ ನಾನು ಆತನಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಆತನಿಗಾಗಿ ಹುಡುಕಾಡಿದೆವು. ಅಷ್ಟೊತ್ತರಲ್ಲಿ ಪೊಲೀಸರಿಂದ ನಮಗೆ ಕರೆ ಬಂತು ಎಂದು ಅಂಕಿತ್ ಅವರ ಸಹೋದರ ಹೇಳಿದ್ದಾರೆ.
ದಿನಗಳ ಹಿಂದೆಯಷ್ಟೇ ದರ್ಬಂಗಾ ಜಿಲ್ಲೆಯಲ್ಲಿ ಇಬ್ಬರು ಇಂಜಿನಿಯರ್‌ಗಳನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಆಗಂತುಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು.