ತಮಿಳುನಾಡು ಹಿಂದೂ ದೇವಾಲಯಗಳಲ್ಲಿ ಜೀನ್ಸ್, ಸ್ಕರ್ಟ್ ಗೆ ನಿರ್ಬಂಧ

ದೇವಾಲಯ ಪ್ರವೇಶಕ್ಕೆ ವಸ್ತ್ರ ಸಂಹಿತೆ ತರುವ ಉದ್ದೇಶದಿಂದಾಗಿ ಜನವರಿ 1 ರಿಂದ ಜೀನ್ಸ್, ಲೆಗ್ಗಿಂಗ್ಸ್, ಸ್ಕರ್ಟ್ ಧರಿಸಿದವರು ತಮಿಳುನಾಡಿನ ದೇವಾಲಯಗಳನ್ನು...
ಆಧುನಿಕ ಉಡುಗೆ(ಸಾಂದರ್ಭಿಕ ಚಿತ್ರ)
ಆಧುನಿಕ ಉಡುಗೆ(ಸಾಂದರ್ಭಿಕ ಚಿತ್ರ)

ಚೆನ್ನೈ: ದೇವಾಲಯ ಪ್ರವೇಶಕ್ಕೆ ವಸ್ತ್ರ ಸಂಹಿತೆ ತರುವ ಉದ್ದೇಶದಿಂದಾಗಿ ಜನವರಿ 1 ರಿಂದ ಜೀನ್ಸ್, ಲೆಗ್ಗಿಂಗ್ಸ್, ಸ್ಕರ್ಟ್ ಧರಿಸಿದವರು ತಮಿಳುನಾಡಿನ ದೇವಾಲಯಗಳನ್ನು ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.

ಹೀಗೆಂದು ಆದೇಶವನ್ನು ತಮಿಳುನಾಡಿದ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಹೊಸ ವಸ್ತ್ರ ಸಂಹಿತೆ ಜ.1 ರಿಂದ ಜಾರಿಯಾಗಲಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿ ಆಗಮಿಸುವಂತೆ ಭಕ್ತಾದಿಗಳಿಗೆ ಸೂಚಿನೆ ನೀಡಿದೆ.

ದೇವಾಲಯ ಪ್ರವೇಶಕ್ಕೆ ವಸ್ತ್ರ ಸಂಹಿತೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಆದರೆ ದೇವಾಲಯಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡಿದ್ದವು. ಈಗ ತಮಿಳುನಾಡಿನ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಹೊಸ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದೆ.

ಈ ಹಿಂದೆ ಮದ್ರಾಸ್ ಹೈಕೋರ್ಟ್​ನ ಮಧುರೈ ಪೀಠವು ಹೊಸ ವಸ್ತ್ರ ಸಂಹಿತೆಗೆ ಹಸಿರು ನಿಶಾನೆ ತೋರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com