ಆರೂವರೆ ತಿಂಗಳು ಹೆರಿಗೆ ರಜೆ

ಖಾಸಗಿ ಕ್ಷೇತ್ರದ ಮಹಿಳಾ ಉದ್ಯೋಗಿಗಳ ಹೆರಿಗೆ ರಜೆ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ಖಾಸಗಿ ಕ್ಷೇತ್ರದ ಮಹಿಳಾ ಉದ್ಯೋಗಿಗಳ ಹೆರಿಗೆ ರಜೆ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ.

ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿ ರುವ ಮಹಿಳೆಯರ ಹೆರಿಗೆ ರಜೆಯನ್ನು ಆರೂವರೆ ತಿಂಗಳಿಗೆ ಏರಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಸೋಮವಾರ ತಿಳಿಸಿದ್ದಾರೆ.

``ಮಗುವಿಗೆ 6 ತಿಂಗಳ ಕಾಲ ಎದೆ ಹಾಲುಣಿಸುವುದು ಅತ್ಯವಶ್ಯ. ಈ ಹಿನ್ನೆಲೆ ಯಲ್ಲಿ ಹೆರಿಗೆ ರಜೆಯನ್ನು 6 ತಿಂಗಳಿಗೆ ವಿಸ್ತರಿಸುವಂತೆ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆಯಲಾಗಿತ್ತು. ಇದ-ನ್ನು ಒಪ್ಪಿರುವ ಕಾರ್ಮಿಕ ಇಲಾಖೆ, ಹೆರಿಗೆ ಅವಧಿಯನ್ನು ವಿಸ್ತರಿಸಿದೆ,'' ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com