ಇಸ್ಲಾಮಿಕ್ ಸ್ಟೇಟ್ ಬಾವುಟ
ದೇಶ
ಶ್ರೀನಗರದಲ್ಲಿ ಉಗ್ರ ಹಫೀಜ್ ಸಯೀದ್ ಪೋಸ್ಟರ್, ಇಸಿಸ್ ಬಾವುಟ ಪ್ರದರ್ಶನ
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ ಭಾವುಟ ಹಾಗೂ ಜಮತ್ ಉದ್ ದವಾ ಉಗ್ರ ಸಂಘಟನೆಗೆ ಮುಖ್ಯಸ್ಥ ಹಫೀಜ್ ಸಯೀದ್ ಪೋಸ್ಟರ್ ಗಳನ್ನು...
ಶ್ರೀನಗರ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ ಭಾವುಟ ಹಾಗೂ ಜಮತ್ ಉದ್ ದವಾ ಉಗ್ರ ಸಂಘಟನೆಗೆ ಮುಖ್ಯಸ್ಥ ಹಫೀಜ್ ಸಯೀದ್ ಪೋಸ್ಟರ್ ಗಳನ್ನು ಪ್ರತಿಭಟನಾಕಾರರು ಶ್ರೀನಗರದ ಜಾಮಿಯಾ ಮಸೀದಿ ಬಳಿ ಪ್ರದರ್ಶಿಸಿದ್ದಾರೆ.
ಜಮ್ಮುವಿನ ರಜೌರಿ ಜಿಲ್ಲೆಯಲ್ಲಿ ಗ್ರಾಮ ರಕ್ಷಣಾ ಸಮಿತಿ ಸದಸ್ಯರು ತಾಯಿ ಮತ್ತು ಅಪ್ರಾಪ್ತ ಬಾಲಕನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.
ಉಗ್ರವಾದವನ್ನು ಹತ್ತಿಕ್ಕುವ ಸಲುವಾಗಿ ಗ್ರಾಮ ರಕ್ಷಣಾ ಸಮಿತಿಯನ್ನು ರಾಜ್ಯ ಸರ್ಕಾರ ನೇಮಿಸಿತ್ತು. ಮುಸುದಾರಿ ಗುಂಪು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಕಲ್ಲು ತೂರಿದ್ದಾರೆ. ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು ಪ್ರಯೋಗಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ