

ಮುಂಬೈ: ವಾಣಿಜ್ಯನಗರಿ, ಮಾಯಾನಗರಿ ಎಂದೆಲ್ಲಾ ಕರೆಸಿಕೊಳ್ಳುವ ಸಮುದ್ರ ತಟದಲ್ಲಿರುವ ಮುಂಬೈ ಮಹಾನಗರವನ್ನು ಹೆಲಿಕಾಪ್ಟರ್ ನಲ್ಲಿ ಕುಳಿತು ವೀಕ್ಷಿಸುವಂತಾ ಅವಕಾಶ ಪ್ರವಾಸಿಗರಿಗೆ ಸಿಗಲಿದೆ.
ನಗರ ಪ್ರದಕ್ಷಿಣೆಗೆ ಹೆಲಿಕಾಪ್ಟರ್ ಸೇವೆ ಆರಂಭಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಪವನ್ ಹನ್ಸ್ ಜತೆ ಕೈಜೋಡಿಸಿದ್ದು, ಜನವರಿ 7 ರಿಂದ ಈ ಸೇವೆ ಅರಂಭಿಸಲಾಗುತ್ತಿದೆ. ಈ ಸೇವೆಗೆ ಮುಂಬೈ ದರ್ಶನ ಎಂದು ನಾಮಕರಣ ಮಾಡಿದೆ.
ಆರಂಭದಲ್ಲಿ ಎರಡು ಹೆಲಿಕಾಪ್ಟರ್ಗಳನ್ನು ಇದಕ್ಕೆ ಬಳಸಲಾಗುತ್ತಿದೆ. ಮುಂಬೈ ವಿಮಾನಯಾನಕ್ಕೆ ತೊಂದರೆಯಾಗದ ರೀತಿಯಲ್ಲಿ ಈ ಸೇವೆ ನೀಡಲಾಗುವುದು. ಕಾರಣ ಹೆಲಿಕಾಪ್ಟರ್ ಜುಹು ವಿಮಾನ ನಿಲ್ದಾಣದಿಂದ ಉತ್ತರಾಭಿಮುಖವಾಗಿ ಹಾರಿ ನಗರ ದರ್ಶನ ಮಾಡಿಸಲಿದೆ. ತೆರಿಗೆ ಸೇರಿ ಪ್ರತಿ ನಿಮಿಷಕ್ಕೆ 320 ರೂ.ನಷ್ಟು ದರ ನಿಗಧಿಪಡಿಸಲಾಗಿದೆ ಎಂದು ಎಂಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಜೆ. ನೈನುಟಿಯಾ ತಿಳಿಸಿದ್ದಾರೆ.
Advertisement