ಬೆಳಗಾವಿ ಏರ್‍ಪೋರ್ಟ್ ಮೇಲ್ದರ್ಜೆ: ಸಿಕ್ತು ಒಪ್ಪಿಗೆ

ಬೆಳಗಾವಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಉತ್ತರ ಕರ್ನಾಟಕ ಮೂಲದ ಕೂಗಿಗೆ...
ಬೆಳಗಾವಿ ವಿಮಾನ ನಿಲ್ದಾಣ
ಬೆಳಗಾವಿ ವಿಮಾನ ನಿಲ್ದಾಣ

ನವದೆಹಲಿ: ಬೆಳಗಾವಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಉತ್ತರ ಕರ್ನಾಟಕ ಮೂಲದ ಕೂಗಿಗೆ ಕೊನೆಗೂ ಮಾನ್ಯತೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿಮಾನ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಒಪ್ಪಿಗೆ ನೀಡಿದೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಈಗ ಎಟಿಆರ್-72 ವಿಮಾನ ಮಾತ್ರ ಸಂಚರಿಸುತ್ತಿದೆ. ಆದರೆ, ಪ್ರತಿ ದಿನಕ್ಕೆ ಎ-321 ವಿಮಾನ ಸಂಚರಿಸುವ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಮೊದಲು 360.44 ಎಕರೆ ವ್ಯಾಪ್ತಿಯನ್ನು ಹೊಂದಿದ್ದ ವಿಮಾನ ನಿಲ್ದಾಣದ ವಿಸ್ತರಣೆಗಾಗಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಮಾಗಿ 370 ಎಕರೆಯನ್ನು ನೀಡಲಾಗಿತ್ತು. ಅಂದಾಜು ರು. 293.35 ಕೋಟಿ ವೆಚ್ಚದ ಯೋಜನೆ ಇದಾಗಿದೆ.

ಎ-321 ವಿಮಾನವು ಸುಗಮ ಕಾರ್ಯನಿರ್ವಹಣೆಗಾಗಿ ಹೊಸ ರನ್ ವೇ, ರನ್ ವೇ ಕೊನೆ, ವಾಯು ಸಂಚಾರ ದಟ್ಟಣೆ ನಿರ್ವಹಣೆ, ಸುರಕ್ಷತೆ, ಅಗ್ನಿಶಾಮಕ ಉಪಕರಣ, ಮಳೆನೀರು ಕೊಯ್ಲು, ಕೊಳಚೆ ನೀರು ಸಂಸ್ಕರಣಾ ಘಟಕ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದೀಗ ಇಲ್ಲಿ ವರ್ಷಕ್ಕೆ 13,778 ಮಂದಿ ಪ್ರಯಾಣಿಸುತ್ತಿದ್ದು, 2022-23ರ ವೇಳೆಗೆ ಈ ಸಂಖ್ಯೆಯನ್ನು 92,590ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com