ಬಿಜೆಪಿ ಬಿಕ್ಕಟ್ಟು: ರಾಜಿನಾಮೆ ನೀಡಿ ಬಳಿಕ ವಾಪಸ್ ಪಡೆದ ನರೇಂದ್ರ

ನರೇಂದ್ರ ಟಂಡನ್
ನರೇಂದ್ರ ಟಂಡನ್
Updated on

ನವದೆಹಲಿ: ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರ ವರ್ತನೆಯಿಂದ ಮನನೊಂದು ತಮ್ಮ ಎಲ್ಲಾ ಸ್ಥಾನಗಳಿಗೂ ರಾಜಿನಾಮೆ ನೀಡಿದ್ದ ಬಿಜೆಪಿ ಮುಖಂಡ ನರೇಂದ್ರ ಟಂಡನ್ ಬಳಿಕ ರಾಜಿನಾಮೆಯನ್ನು ಹಿಂಪಡೆದಿದ್ದಾರೆ.

ಕಿರಣ್ ಬೇಡಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ಪಕ್ಷದ ಹಿರಿಯರಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದ್ದ ಟಂಡನ್ ಸೋಮವಾರ ಬೆಳಗ್ಗೆಯಷ್ಟೇ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದರು. ಬಳಿಕ ಟಂಡನ್ ರಾಜಿನಾಮೆ ಹಿಂಪಡೆದಿದು ವರಿಷ್ಠರಲ್ಲಿ ಕ್ಷಮೆಯಾಚಿಸಿದ್ದಾರೆ. ಇದರೊಂದಿಗೆ ದೆಹಲಿ ಆಂತರಿಕ ಬಿಕ್ಕಟ್ಟು ಶಮನವಾದಂತಾಗಿದೆ.

ಆದರೆ ಮನಸು ಬದಲಾಯಿಸಿಕೊಂಡ ಟಂಡನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕ್ಷಮೆಯಾಚಿಸಿ ತಮ್ಮ ರಾಜಿನಾಮೆಯನ್ನು ಮರಳಿ ಪಡೆದಿದ್ದು ಇನ್ನು ಇಂತಹ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com