ದಾವೂದ್ ಸಹೋದರನ ಸೆರೆ

ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ, ಸುಲಿಗೆ ನಡೆಸಿದ ಆರೋಪದ ಮೇಲೆ ಭೂಗತ ಪಾತಕಿ ದಾವೂದ್...
ದಾವೂದ್ ಸಹೋದರ ಇಕ್ಬಾಲ್  ಕಾಸ್ಕರ್
ದಾವೂದ್ ಸಹೋದರ ಇಕ್ಬಾಲ್ ಕಾಸ್ಕರ್
Updated on: 

ಮುಂಬೈ: ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ, ಸುಲಿಗೆ ನಡೆಸಿದ ಆರೋಪದ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ, ಮತ್ತಿಬ್ಬರು ಸಹಚರರನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ದಾವೂದ್ ಸಹೋದರ ಕಾಸ್ಕರ್ ಹಾಗೂ ಆತನ ಸಹಚರರು ಶುಕ್ರವಾರ ರು. 30 ಲಕ್ಷ ಕೊಡುವಂತೆ ಬೆದರಿಕೆಯೊಡ್ಡಿದ್ದರು. ಕೊಡಲೊಪ್ಪದ್ದರಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಉದ್ಯಮಿ ಸಲೀಂ ಶೇಖ್ ಬೈಕುಲಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರ ಮೇಲೆ ಐಪಿಸಿ ಸೆಕ್ಷನ್ 385, 325, 34ರ ಅನ್ವಯ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com