
ಅಮ್ಮಾನ್: ಜೋರ್ಡಾನ್ ಪೈಲಟ್‌ನನ್ನು ಇಸಿಸ್ ಸಂಘಟನೆ ಜೀವಂತವಾಗಿ ದಹಿಸಿದ ಬೆನ್ನಲ್ಲೇ ಜೋರ್ಡಾನ್ ಸರ್ಕಾರ ತನ್ನ ವಶದಲ್ಲಿದ್ದ ಇಬ್ಬರು ಉಗ್ರರನ್ನು ಗಲ್ಲಿಗೇರಿಸಿದೆ.
ಜೈಲಿನಲ್ಲಿರುವ ಉಗ್ರರರನ್ನು ಬಿಡುವಂತೆಯೂ ಬಿಡದಿದ್ದರೆ ಪೈಲಟ್ ನನ್ನು ಕೊಲ್ಲುವುದಾಗಿ ಹೇಳಿದ್ದ ಇಸಿಸ್ ಸಂಘಟನೆಯು ಜೋರ್ಡಾನ್ ಪೈಲಟ್ನನ್ನು ಜೀವಂತವಾಗಿ ದಹಿಸಿದ ಬೆನ್ನಲ್ಲೇ ಪ್ರತೀಕಾರ ತೀರಿಸಿಕೊಂಡಿರುವ ಜೋರ್ಡಾನ್ ಸರ್ಕಾರ ತನ್ನ ವಶದಲ್ಲಿದ್ದ ಇಬ್ಬರು ಐಎಸ್ಐಎಸ್ ಉಗ್ರರನ್ನು ನೇಣಿಗೇರಿಸಿದೆ.
ಅಲ್ ಖೈದಾಗೆ ಸೇರಿದ ಮಹಿಳಾ ಸೂಸೈಡ್ ಬಾಂಬರ್ ಸೇರಿದಂತೆ ಇಬ್ಬರು ಉಗ್ರರನ್ನು ನೇಣಿಗೇರಿಸಿದೆ. ಈಗಾಗಲೇ ಜೋರ್ಡಾನ್ ಸರ್ಕಾರ ಉಗ್ರರನ್ನು ನೇಣಿಗೇರಿಸಿರುವ ಕುರಿತು ಪ್ರಕಟಣೆ ಹೊರಡಿಸಿದ್ದು, ಐಎಸ್ಐಎಸ್ ಉಗ್ರರನ್ನು ಸದೆಬಡೆಯಲು ಜೋರ್ಡಾನ್ ಸರ್ಕಾರ ಸಿದ್ಧವಾಗಿದೆ ಎಂದು ಸರ್ಕಾರದ ವಕ್ತಾರ ಅಲ್ ಮೊಮಾನಿ ಹೇಳಿದ್ದಾರೆ.
ಮೃತ ಉಗ್ರರನ್ನು ಸಾಜಿದಾ ಅಲ್ ರಿಷಾವಿ ಹಾಗೂ ಜಿಯಾದ್ ಅಲ್ ಕರ್ಬೌಲಿ ಎಂದು ಗುರುತಿಸಲಾಗಿದೆ. ಜೋರ್ಡಾನ್ ರಾಜಧಾನಿ ಅಮ್ಮಾನ್ ನಲ್ಲಿ 2005ರಲ್ಲಿ ಹೋಟೆಲ್ ತ್ರಿವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಜಿದಾ ಬಂಧಿತಳಾಗಿದ್ದಳು. ಅಂದಿನ ಸ್ಫೋಟದಲ್ಲಿ ಒಟ್ಟು 12 ಜನರು ಧಾರುಣವಾಗಿ ಸಾವಿಗೀಡಾಗಿದ್ದರು.
Advertisement