
ತೈಪೆ: 58 ಜನರನ್ನು ಹೊತ್ತುಯ್ಯೋತ್ತಿದ್ದ ವಿಮಾನ ನದಿಗೆ ಬಿದ್ದು, 9 ಜನರು ಸಾವನ್ನಪ್ಪಿರುವ ಘಟನೆ ಬುಧವಾರ ತೈವಾನ್ ನ ತೈಪೆ ನಗರದಲ್ಲಿ ನಡೆದಿದೆ.
ತೈವಾನ್ ರಾಜಧಾನಿ ತೈಪೆ ನಗರ ಹೊರವಲಯದಲ್ಲಿ ಈ ಘಟನೆ ಸಂಭವಿಸಿದ್ದು, ವಿಮಾನದಲ್ಲಿ ಸಿಲುಕಿದ್ದವರಲ್ಲಿ 17 ಜನರನ್ನು ರಕ್ಷಿಸಲಾಗಿದ್ದು, 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಷ್ಟು ಪ್ರಯಾಣಿಕರು ಅದರಲ್ಲಿ ಸಿಲುಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೇಶಿಯ ಹಾರಾಟದಲ್ಲಿದ್ದ ಟ್ರಾನ್ಸ್ಏಷ್ಯಾ ಎಟಿಆರ್ 72600 ವಿಮಾನವು ನದಿಗೆ ಉರುಳುವ ಮುನ್ನ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ತೈಪೆ ನಗರದ ಸಾಂಗ್ಶಾನ್ ವಿಮಾನ ನಿಲ್ದಾಣದಿಂದ ಕಿನ್‌ಮೆನ್ ದ್ವೀಪಕ್ಕೆ ಪ್ರಯಾಣಿಸುತ್ತಿದ್ದ ವಿಮಾನವು ಟೇಕ್‌ಆಫ್ ಆದ ಕೆಲವು ನಿಮಿಷಗಳ ಬಳಿಕ ದುರಂತಕ್ಕೀಡಾಗಿದೆ ಎಂದು ವರದಿಗಳು ಹೇಳಿವೆ.
ವಿಮಾನದಲ್ಲಿ ಸಿಲುಕಿರುವ ಪ್ರಯಾಣಿಕರ ನೆರವಿನ ಕಾರ್ಯದಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ. ಕಳೆದ ಜುಲೈನಲ್ಲಿ ಟ್ರಾನ್ಸ್‌ಏಷ್ಯಾ ವಿಮಾನ ಪತನಗೊಂಡು 48 ಜನರು ಸಾವನ್ನಪ್ಪಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement