ಮುಂಬೈನಲ್ಲಿ ಆತಂಕ ಸೃಷ್ಟಿಸಿದ ಹಂದಿಜ್ವರ

ಮಹಾಮಾರಿ ಹೆಚ್1ಎನ್1ಗೆ ಮಂಗಳವಾರ ಮತ್ತೋರ್ವ ಮಹಿಳೆಯೊಬ್ಬರು ಬಲಿಯಾಗಿದ್ದು, ಮುಂಬೈ...
ಹಂದಿ ಜ್ವರಕ್ಕೆ ಮತ್ತೋರ್ವ ಮಹಿಳೆ ಬಲಿ
ಹಂದಿ ಜ್ವರಕ್ಕೆ ಮತ್ತೋರ್ವ ಮಹಿಳೆ ಬಲಿ
Updated on: 

ಮುಂಬೈ: ಮಹಾಮಾರಿ ಹೆಚ್1ಎನ್1ಗೆ ಮಂಗಳವಾರ ಮತ್ತೋರ್ವ ಮಹಿಳೆಯೊಬ್ಬರು ಬಲಿಯಾಗಿದ್ದು, ಮುಂಬೈನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಘರ್ ನಗರದ ಮಹಿಳೆಯೊಬ್ಬರು ಹಂದಿ ಜ್ವರಕ್ಕೆ ತುತ್ತಾಗಿ ಸಾವಿಗೀಡಾಗಿದ್ದಾರೆ. ಸಾವನ್ನಪ್ಪಿದ್ದ ಮಹಿಳೆಗೆ ಹೆಚ್1ಎನ್1 ರೋಗ ಇರುವುದಾಗಿ ಆಕೆಯ ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಅನಾರೋಗ್ಯಕ್ಕೀಡಾಗಿದ್ದ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಮಹಿಳೆಯ ಸ್ಥಿತಿ ತೀವ್ರ ಉಲ್ಭಣಗೊಂಡಾಗ ಅಲ್ಮಾಡಾದ ಹೋಲಿ ಸ್ಪಿರಿಟ್ ಆಸ್ಪತ್ರೆಗೆ ದಾಖಲು ಮಾಡಿ ಎಂದು ಅಲ್ಲಿನ ವೈದ್ಯರು ಸಲಹೆ ನೀಡಿದ್ದಾರೆ. ನಂತರ ಆಕೆಯ ಕುಟುಂಬಸ್ಥರು ಆಕೆಯನ್ನು ಹೋಲಿ ಸ್ಪಿರಿಟ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ನಂತರ ಆಕೆಯ ದೇಹವನ್ನು ಪರೀಕ್ಷೆಗೊಳಪಡಿಸಿದಾಗ ಮಹಿಳೆಗೆ ಹಂದಿಜ್ವರ ಇರುವುದು ತಿಳಿದುಬಂದಿತು. ಆಕೆಗೆ ಹಲವು ದಿನಗಳ ಹಿಂದೆಯೇ ಹಂದಿ ಜ್ವರ ರೋಗ ಕಂಡುಬಂದಿದ್ದು, ಕುಟುಂಬಸ್ಥರಿಗೂ ಹರಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮಹಿಳೆಯ ಕುಟುಂಬದ ಎಲ್ಲಾ ಸದಸ್ಯರನ್ನೂ ಪರೀಕ್ಷೆಗೊಳಪಡುವಂತೆ ತಿಳಿಸಲಾಗಿದೆ ಎಂದು ಹೋಲಿ ಸ್ಪಿರಿಟ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಮುಂಬೈನ ಜನರ ಆತಂಕಕ್ಕೆ ಹೆಚ್1ಎನ್1 ರೋಗ ಒಂದು ರೀತಿಯ ಕಾರಣವಾದರೆ, ಪಲ್ಘರ್‌ನ ಮುನ್ಸಿಪಲ್ ಕಾರ್ಪೋರೇಷನ್ ಆರೋಗ್ಯ ಇಲಾಖೆಯ ಬೇಜಬ್ದಾರಿಯುತ ಕೆಲಸ ಮತ್ತೊಂದು ರೀತಿಯ ಆತಂಕವನ್ನು ಸೃಷ್ಟಿಸುತ್ತಿದೆ. ಇದಕ್ಕೆ ಕಾರಣ ಪಲ್ಘರ್‌ನ ನಗರದ ವೈದ್ಯಕೀಯ ಅಧಿಕಾರಿಗಳೇ ಇಲ್ಲದಿರುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com