
ಮುಂಬೈ: ವಾಹನಗಳ ಪಾರ್ಕಿಂಗ್‌ಗಾಗಿ ಬಾಂದ್ರಾದ ತಮ್ಮ ನಿವಾಸದ ಸಮೀಪ ರಸ್ತೆ ಒತ್ತುವರಿ ಮಾಡಿ ರ್ಯಾಂಪ್ ನಿರ್ಮಿಸಿಕೊಂಡಿದ್ದ ಬಾಲಿವುಡ್ ಬಾದ್ ಶಾ ನಟ ಶಾರುಖ್ ಖಾನ್‌ರಿಗೆ ರ್ಯಾಂಪ್ ತೆರವುಗೊಳಿಸುವಂತೆ ಬಿಎಂಸಿ ನೋಟಿಸ್ ಜಾರಿ ಮಾಡಿದೆ.
ಶಾರುಖ್ ವಾಹನಗಳ ಪಾರ್ಕಿಂಗ್‌ಗಾಗಿ ಅನಧಿಕೃತ ರ್‍ಯಾಂಪ್ ನಿರ್ಮಿಸಿರುವ ಕಾರಣ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಅದನ್ನು ಒಡೆದುಹಾಕಬೇಕು ಎಂದು ಬಿಜೆಪಿ ಸಂಸದೆ ಪೂನಂ ಮಹಾಜನ್ ಅವರು ಮುಂಬೈ ಮಹಾನಗರಪಾಲಿಕೆಗೆ ಪತ್ರ ಮುಖೇನ ಆಗ್ರಹಿಸಿದ್ದರು.
ಇದೀಗ ಶಾರುಖ್ ರಿಗೆ ನೋಟಿಸ್ ಜಾರಿ ಮಾಡಿರುವ ಬ್ರಿಹಾನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಏಳು ದಿನಗಳೊಳಗಾಗಿ ರ್ಯಾಂಪ್ ತೆರವುಗೊಳಿಸುವಂತೆ ಸೂಚಿಸಿದೆ.
Advertisement