`ಘೋರ' ಪರಿಶೀಲನೆ

ಮಾಹಿತಿ ತಂತ್ರಜ್ಞಾ ನ ಕಾಯ್ದೆಯ ನಿಬಂಧನೆಯಲ್ಲಿ ಬರುವ `ಘೋರ ಅಪರಾಧ' ಪದವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಮಾಹಿತಿ ತಂತ್ರಜ್ಞಾ ನ ಕಾಯ್ದೆಯ ನಿಬಂಧನೆಯಲ್ಲಿ ಬರುವ `ಘೋರ ಅಪರಾಧ' ಪದವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಆಕ್ಷೇಪಾರ್ಹ ಕಮೆಂಟ್‍ಗಳನ್ನು ಪೋಸ್ಟ್  ಮಾಡುವ ವೆಬ್ ಬಳಕೆದಾರರನ್ನು ಬಂಧಿಸುವ ಅಧಿಕಾರವನ್ನು ಈ ಪದವು ಪೋಲೀಸರಿಗೆ ನೀಡುತ್ತದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಬುಧವಾರ ಸುಪ್ರೀಂನಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿಂಸೆಗೆ ಪ್ರೇರಣೆ ನೀಡುವ ವಿಚಾರ ಬಿಟ್ಟು ಬೇರೆ ಯಾವುದೂ `ಘೋರ ಅಪರಾಧ' ಆಗುವುದಿಲ್ಲ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, `ಘೋರ ಅಪರಾಧ' ಎಂಬ ಪದವೇ ಅಸ್ಪಷ್ಟವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com