ಮಾರನ್ ಪ್ರಕರಣ: ಆದೇಶ ಹಿಂದಕ್ಕೆ

ಏರ್ ಸೆಲ್-ಮ್ಯಾಕ್ಸಿಸ್ ಡೀಲ್ ಪ್ರಕರಣದಲ್ಲಿ ಡಿಎಂಕೆ ಮುಖಂಡ ದಯಾನಿಧಿ ಮಾರನ್ ವಿರುದ್ಧದ ಸಮನ್ಸ್ ಗೆ ಸಂಬಂಧಿಸಿ ದೆಹಲಿ ಹೈಕೋರ್ಟ್‍ಗೆ...
ದಯಾನಿಧಿ ಮಾರನ್ (ಸಂಗ್ರಹ ಚಿತ್ರ)
ದಯಾನಿಧಿ ಮಾರನ್ (ಸಂಗ್ರಹ ಚಿತ್ರ)

ನವದೆಹಲಿ: ಏರ್ ಸೆಲ್-ಮ್ಯಾಕ್ಸಿಸ್ ಡೀಲ್ ಪ್ರಕರಣದಲ್ಲಿ ಡಿಎಂಕೆ ಮುಖಂಡ ದಯಾನಿಧಿ ಮಾರನ್ ವಿರುದ್ಧದ ಸಮನ್ಸ್ ಗೆ ಸಂಬಂಧಿಸಿ ದೆಹಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸುವಂತೆ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ನಿಲುವು ಬದಲಿಸಿದ ಪ್ರಸಂಗ ಶುಕ್ರವಾರ ನಡೆಯಿತು.

2ಜಿ ಹಗರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಉನ್ನತ ನ್ಯಾಯಾಲಯ ಹೊರತುಪಡಿಸಿ ಬೇರಿನ್ಯಾವ ನ್ಯಾಯಾಲಯದಲ್ಲೂ ನಡೆಸ ಬಾರದು ಎನ್ನುವ ಹಿಂದಿನ ತೀರ್ಪನ್ನು ಸಿಬಿಐ ಗಮನಕ್ಕೆ ತಂದ ಬಳಿಕ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಊಟದ ವಿರಾಮಕ್ಕೆ ತೆರಳುವ ಮುನ್ನ ನ್ಯಾ.ವಿ.ಗೋಪಾಲಗೌಡ ಮತ್ತು ನ್ಯಾ.
ಆರ್. ಭಾನುಮತಿ ಅವರಿದ್ದ ಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಪಿಂಕಿ ಆನಂದ್ ಅವರು ಸಿಬಿಐ ಪರ ಈ ವಿಚಾರವನ್ನು ಪೀಠದ ಗಮನಕ್ಕೆ ತಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com