
ಪಾಟ್ನಾ: ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಹಾರ ವಿಧಾನಸಭೆ ಸ್ಪೀಕರ್ ಉದಯ್ ನಾರಾಯಣ್ ಚೌದರಿ ಅವರು ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರನ್ನು ಜೆಡಿಯುನ ಶಾಸಕಾಂಗ ಪಕ್ಷದ ನಾಯಕನಾಗಿ ಪರಿಗಣಿಸಿದ್ದಾರೆ.
ನಿತೀಶ್ ಕುಮಾರನ್ನು ಜೆಡಿಯುನ ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಸ್ಪೀಕರ್ ಅವರು ಪರಿಗಣಿಸಿವುದನ್ನು ಬಿಹಾರ ವಿಧಾನಸಭೆ ಉಸ್ತುವಾರಿ ಕಾರ್ಯದರ್ಶಿ ಹರೇರಾಮ್ ಮುಖಿಯ ಅವರ ಹೊರಡಿಸಿರುವ ಪತ್ರದಲ್ಲಿ ತಿಳಿಸಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಉನ್ನತ ಮೂಲಗಳು ಹೇಳಿದರು.
ಈ ಪತ್ರವನ್ನು ರಾಜ ಭವನ್, ಬಿಹಾರ ಮುಖ್ಯಮಂತ್ರಿಗಳ ಕಚೇರಿ ಹಾಗೂ ನಿತೀಶ್ ಕುಮಾರ್ ಕಚೇರಿಗೆ ಕಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ವಿಧಾನಸಭೆ ಕಾರ್ಯದರ್ಶಿಗಳು ಕಳಿಸಿರುವ ಪತ್ರವನ್ನು ಸ್ವೀಕರಿಸಲಾಗಿದೆ ನಿತೀಶ್ ಕುಮಾರ್ ಕಚೇರಿಯ ಅಧಿಕೃತವಾಗಿ ದೃಢಪಡಿಸಿವೆ.
Advertisement