ಬ್ಯಾಂಕ್ ಗಳಿಗೆ ರು.6,990 ಕೋಟಿ ಬಂಡವಾಳ

ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಪೂರೈಸಲು ಮೂಲ ಬಂಡವಾಳ ಹೆಚ್ಚಿಸಲು ಕೇಂದ್ರ ಸರ್ಕಾರ...
ಬ್ಯಾಂಕ್ ಗಳಿಗೆ ರು.6,990 ಕೋಟಿ ಬಂಡವಾಳ

ನವದೆಹಲಿ: ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಪೂರೈಸಲು ಮೂಲ ಬಂಡವಾಳ ಹೆಚ್ಚಿಸಲು ಕೇಂದ್ರ ಸರ್ಕಾರ ಸದ್ಯದಲ್ಲೇ ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಒಟ್ಟು 9 ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳಿಗೆ ರು.6,990 ಕೋಟಿ ನೀಡಲಿದೆ.

ಕೇಂದ್ರ ಸರ್ಕಾರ ಕಳೆದ ಬಜೆಟ್ ನಲ್ಲಿ ಈ ರೀತಿ ಬ್ಯಾಂಕ್ ಗಳ ಬಂಡವಾಳ ಹೆಚ್ಚಿಸಲು ರು.11,200 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿತ್ತು. ಅದರ ಮೊದಲ ಕಂತಾಗಿ ಸರ್ಕಾರ ಈಗ ಒಂಬತ್ತು ಬ್ಯಾಂಕ್ಗಳಿಗೆ ಹಣ ನೀಡಲಿದೆ. ಬ್ಯಾಂಕ್ಗಳ ಸಾಧನೆ ಆಧಾರದ ಮೇಲೆ ಈ ಹಣ ಬಿಡುಗಡೆ ಮಾಡಲಾಗುವುದು.

2018ರ ಒಳಗಾಗಿ ಭಾರತದ ಎಲ್ಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ರು.3 ಲಕ್ಷ ಕೋಟಿ ಬಂಡವಾಳ ಹೊಂದಿರಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com