
ನವದೆಹಲಿ:`ಸಮೀಕ್ಷೆಗಳಲ್ಲಿ ಹೇಳಿರುವುದೆಲ್ಲ ಸುಳ್ಳು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಮಗೆ 34-38 ಸ್ಥಾನಗಳು ಸಿಗಲಿವೆ. ಹೀಗಾಗಿ ನಾವೇ ಗೆಲ್ಲುತ್ತೇವೆ'.
ಹೀಗೆಂದು ಹೇಳಿದ್ದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ. ಎಲ್ಲ 70 ಕ್ಷೇತ್ರಗಳಲ್ಲಿ ಪಕ್ಷದ ಸಾಧನೆಯನ್ನು ಅವಲೋಕಿಸಿದ್ದೇವೆ. 2013ರ ಡಿಸೆಂಬರ್‍ನಲ್ಲಿಯೂ ಫಲಿತಾಂಶದ ಬಳಿಕ ಸಮೀಕ್ಷೆಗಳು ಸುಳ್ಳಾಗಿದ್ದವು ಎಂದಿದ್ದಾರೆ.
ಉಪಾಧ್ಯಾಯ. ಮತಗಟ್ಟೆ ಸಮೀಕ್ಷೆಗಳಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಜಯ ಸಾಧಿಸಲಿದೆ ಎಂದು ಗೊತ್ತಾದ ಬಳಿಕ ಭಾನುವಾರ ಸಂಜೆ ಪಕ್ಷದ ನಾಯಕರು ಸಭೆ ನಡೆಸಿದರು. ಅದರಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ, ನಾಯಕರಾದ ರಾಮ್ ಲಾಲ್, ಪ್ರಭಾತ್ ಝಾ, ವಿಜಯ್ ಗೋಯಲ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಇದೇ ವೇಳೆ 2 ಮತಗಟ್ಟೆ ವ್ಯಾಪ್ತಿಗಳಲ್ಲಿ ಮರು ಮತದಾನಕ್ಕೆ ದೆಹಲಿ ಚುನಾವಣಾ ಆಯೋಗ ಆದೇಶ ನೀಡಿದೆ.
Advertisement