ಗುಜರಾತ್ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದ ಅಮೆರಿಕ ಅಧಿಕಾರಿಯ ಬಂಧನ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಶ್ ಬಾಯಿ ಪಟೇಲ್- ಬಂಧಿತ ಅಮೆರಿಕ ಅಧಿಕಾರಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಶ್ ಬಾಯಿ ಪಟೇಲ್- ಬಂಧಿತ ಅಮೆರಿಕ ಅಧಿಕಾರಿ

ವಾಷಿಂಗ್ಟನ್: ಗುಜರಾತ್ ಮೂಲದ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ ಅಮೆರಿಕದ ಪೊಲೀಸ್ ಅಧಿಕಾರಿಯನ್ನು ಶುಕ್ರವಾರ ಬಂಧಿಸಲಾಗಿದ್ದು, ಘಟನೆಯ ಕುರಿತು ಎಫ್‌ಬಿಐ ತನಿಖೆ ನಡೆಸುತ್ತಿದೆ.

ಕಳೆದ ಆರು ದಿನಗಳ ಹಿಂದೆ ಗುಜರಾತ್‌ನ 57 ವರ್ಷದ ಸುರೇಶ್ ಭಾಯಿ ಪಟೇಲ್ ಮೇಲೆ ಅಮೆರಿಕದ ಅಲಬಾಮಾ ಪೊಲೀಸ್ ಸಿಬ್ಬಂದಿ ಮಾರಾಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಭಾಯಿ ಪಟೇಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಜನಾಂಗಿಯ ವೈಷಮ್ಯದ ಹಿನ್ನೆಲೆಯಲ್ಲಿ ಸುರೇಶ್ ಹಲ್ಲೆ ನಡೆದಿದೆ ಎನ್ನಲಾಗುತ್ತಿದ್ದು, ಈ ಕುರಿತು ಎಫ್‌ಬಿಐ ತನಿಖೆ ನಡೆಸಲಿದೆ.

ಎರಡು ವಾರಗಳ ಹಿಂದಷ್ಟೇ ಗುಜರಾತಿನಿಂದ ಅಮೆರಿಕಾದಲ್ಲಿರುವ ತಮ್ಮ ಮಗನ ಮನೆಗೆ ಸುರೇಶ್ ತೆರಳಿದ್ದರು. ಅವರಿಗೆ ಇಂಗ್ಲೀಷ್ ಸರಿಯಾಗಿ ಬರುತ್ತಿರಲಿಲ್ಲ. ಪ್ರತಿ ದಿನ ಪಟೇಲ್ ತಮ್ಮ ಮಗನ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದರು. ಆದರೆ, ಅನುಮಾನಗೊಂಡ ಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಸಿದೇ ಮನಬಂದಂತೆ ಥಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com