ಎಂಜಿನಿಯರ್ ಯಾದವ್ ಆಸ್ತಿ ಸಿಬಿಐ ತನಿಖೆಗೆ

ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್‍ಪ್ರೆಸ್ ಹೆದ್ದಾರಿ ಪ್ರಾಧಿಕಾರದಲ್ಲಿ ಎಂಜಿನಿಯರ್ ಆಗಿದ್ದ ಯಾದವ್ ಸಿಂಗ್ ರ ರು. 10 ಸಾವಿರ ಕೋಟಿ ಮೌಲ್ಯದ ಆಸ್ತಿ ಬಗ್ಗೆ ಈಗ ಸಿಬಿಐ ತನಿಖೆ ನಡೆಯಲಿದೆ...
ಯಾದವ್ ಸಿಂಗ್
ಯಾದವ್ ಸಿಂಗ್

ನವದೆಹಲಿ: ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್‍ಪ್ರೆಸ್ ಹೆದ್ದಾರಿ ಪ್ರಾಧಿಕಾರದಲ್ಲಿ ಎಂಜಿನಿಯರ್ ಆಗಿದ್ದ ಯಾದವ್ ಸಿಂಗ್ ರು. 10 ಸಾವಿರ ಕೋಟಿ ಮೌಲ್ಯದ ಆಸ್ತಿ ಬಗ್ಗೆ ಈಗ ಸಿಬಿಐ ತನಿಖೆ ನಡೆಯಲಿದೆ.

ಕಪ್ಪುಹಣದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಕೂಡ ಈ ಎಂಜಿನಿಯರ್ ಹೊಂದಿರುವ ಆಸ್ತಿ ವಿವರ ತಿಳಿದು ಬೆಚ್ಚಿ ಬಿದ್ದಿತ್ತು. ಜತೆಗೆ ವಿವರವನ್ನು ಕೋರಿದ್ದು ಹಳೆಯ ಕತೆ. 2014 ಡಿಸೆಂಬರ್ ನಲ್ಲಿ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆತನ ನಿವಾಸದ ಮೇಲೆ ದಾಳಿ ನಡೆಸಿದ್ದರು. ದಾಳಿ ನಡೆದ ವೇಳೆ 100 ಕೋಟಿ ಮೌಲ್ಯದ ವಜ್ರದ ಆಭರಣಗಳು, ಎರಡು ಕೆಜಿ ಚಿನ್ನಾಭರಣ ಪತ್ತೆಯಾಗಿತ್ತು. ಜತೆಗೆ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು.

ಇದರ ಜತೆಗೆ ಸಿಂಗ್ ಪತ್ನಿಯ ಹೆಸರಿನಲ್ಲಿರುವ ಸುಮಾರು 40 ನಕಲಿ ಕಂಪನಿಗಳ ದಾಖಲೆಗಳನ್ನು ತೆರಿಗೆ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಅವೆಲ್ಲ ದರವನ್ನು ಲೆಕ್ಕ ಹಾಕಿದಾಗ ಆಸ್ತಿತ ಮೊತ್ತ ರು. 10 ಸಾವಿರ ಕೋಟಿಗೂ ಅಧಿಕ ಎಂಬ ಅಂದಾಜನ್ನು ಅಧಿಕಾರಿಗಳು ನಡೆಸಿದ್ದರು. 1980ರಲ್ಲಿ ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್ ಪ್ರೆಸ್ ವೇ ಪ್ರಾಧಿಕಾರದಲ್ಲಿ  ಜ್ಯೂನಿಯರ್ ಎಂಜಿನಿಯರ್ ಆಗಿ ಸೇವೆ ಆರಂಭಿಸಿದ್ದ ಸಿಂಗ್ ಎರಡು ದಶಕಗಳಲ್ಲಿ ಪ್ರಧಾನ ಎಂಜಿನಿಯರ್ ಆಗಿ ಬಡ್ತಿಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com