
ಲಂಡನ್: ಎದುರಿಗೆ ಸುಬಗನಂತೆ ವರ್ತಿಸುತ್ತಿರುವ ಅಮೆರಿಕದ ನರಿಬುದ್ಧಿಯನ್ನು ರಷ್ಯಾದ ಸಂಶೋಧಕರು ಬಯಲಿಗೆಳೆದಿದ್ದಾರೆ.
ವಿಶ್ವದ ಪ್ರತಿಯೊಂದು ಮನೆಯ ಕಂಪ್ಯೂಟರ್‍ನ ಒಳನುಗ್ಗಿ ಅದರೊಳಗಿರುವ ಎಲ್ಲ ಮಾಹಿತಿಗಳನ್ನೂ ಕದಿಯುವ `ರಹಸ್ಯ ಅಸ್ತ್ರ'ವೊಂದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಎಸ್‍ಎ) ಬಳಸುತ್ತಿದೆ.
ಬೇಹುಗಾರಿಕೆ ನಡೆಸುವಂತಹ ವಿಧ್ವಂಸಕ ಸಾಫ್ಟ್ ವೇರ್ ಅನ್ನು ಹಾರ್ಡ್‍ವೇರ್ ಗಳಲ್ಲಿ ಅಡಗಿಸಿಡುವುದು ಹೇಗೆ ಎಂಬ ಕಲೆಯನ್ನು ಕರಗತ ಮಾಡಿಕೊಂಡಿರುವ ಎನ್‍ಎಸ್‍ಎ, ವಿಶ್ವಾದ್ಯಂತ ಕಂಪ್ಯೂಟರ್‍ಗಳ ಮಾಹಿತಿಯ ಗೂಢಚಾರಿಕೆ ನಡೆಸುತ್ತಿದೆ. ರಷ್ಯಾದ ಸೈಬರ್ ಸಂಶೋಧಕರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಭಾರತ ಸೇರಿದಂತೆ 30 ರಾಷ್ಟ್ರಗಳ ಕಂಪ್ಯೂಟರ್‍ಗಳಲ್ಲಿ ಒಂದಲ್ಲ ಒಂದು ಬೇಹುಗಾರಿಕಾ ಪ್ರೋಗ್ರಾಂ ಅನ್ನು ಎನ್‍ಎಸ್‍ಎ ಅಳವಡಿಸಿದೆ. ಇದರಲ್ಲಿ ಅತಿ ಹೆಚ್ಚು ಇನ್ಫೆಕ್ಷನ್‍ಗಳು ಕಂಡುಬಂದಿರುವುದು ಇರಾನ್‍ನಲ್ಲಿ. ನಂತರದ ಸ್ಥಾನಗಳನ್ನು ರಷ್ಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಮಾಲಿ, ಸಿರಿಯಾ, ಯೆಮನ್ ಮತ್ತು ಅಲ್ಜೀರಿಯಾ ಪಡೆದಿವೆ.
ಎನ್‍ಎಸ್‍ಎಯ ಈ ಬೇಹುಗಾರಿಕಾ ಅಭಿಯಾನ ಆರಂಭವಾಗಿದ್ದು 2001ರಲ್ಲಿ. ಆದರೆ 2008ರಲ್ಲಿ ಒಬಾಮ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದು ಇನ್ನಷ್ಟು ಹೆಚ್ಚಾಯಿತು ಎಂದೂ ರಷ್ಯಾ ಹೇಳಿದೆ.
ತಾಂತ್ರಿಕ ಪರಿಣತಿ: ಕಂಪ್ಯೂಟರ್ ಅನ್ನು ಆನ್ ಮಾಡಿದ ತಕ್ಷಣ ಅಸ್ಪಷ್ಟ ಕೋಡ್ ಮೂಲಕ ವೈರಸ್‍ಯುಕ್ತ ಸಾಫ್ಟ್ ವೇರ್ ಅನ್ನು ಸೇರಿಸುವುದು ಹೇಗೆ ಎಂಬ ತಾಂತ್ರಿಕ ಪರಿಣತಿಯನ್ನು ಗೂಢಚಾರರು ಹೊಂದಿದ್ದಾರೆ. ತದನಂತರ ಅವರು ಹಾಡ್ರ್ ವೇರ್ ಮೂಲಕ ಕಂಪ್ಯೂಟರ್ ಅನ್ನು ಆಗಾಗ್ಗೆ ವೈರಸ್ ವ್ಯಾಪಿಸುವಂತೆ ಮಾಡುತ್ತಾರೆ ಎನ್ನುತ್ತದೆ ಕ್ಯಾಸ್ಪರ್‍ಸ್ಕೈ. ಈ ರೀತಿಯಾಗಿ ಲಕ್ಷಾಂತರ ಪಿಸಿಗಳ ಗೂಢಚಾರಿಕೆ ಮಾಡಿ, ಫೈಲುಗಳು ಸೇರಿದಂತೆ ಅನೇಕ ರಹಸ್ಯ ಮಾಹಿತಿಗಳನ್ನು ಕದಿಯಲಾಗುತ್ತದೆ. ಒಟ್ಟಾರೆ ಕಂಪ್ಯೂಟರ್‍ಗಳ ಸಂಪೂರ್ಣ ರಿಮೋಟ್ ಕಂಟ್ರೋಲ್ ಈ ಗೂಢಚಾರರ ಕೈಯಲ್ಲಿರುತ್ತದೆ.
ಸೋರ್ಸ್ ಕೋಡ್ ಪತ್ತೆ
2009ರಲ್ಲಿ ಅಮೆರಿಕದ ಕೆಲವು ಕಂಪನಿಗಳು ಹಾಗೂ ಗೂಗಲ್ ಮೇಲೆ ನಡೆದ ಸೈಬರ್ ದಾಳಿಯ ಮೂಲಕ ಗೂಢಚಾರರು ಸೋರ್ಸ್ ಕೋಡ್ ಅನ್ನು ಕದ್ದಿದ್ದರು. ಇದು ಚೀನಾದ ಕೆಲಸವೆಂದೇ ಹೇಳಲಾಗಿತ್ತು. ಈಗ ಎನ್‍ಎಸ್‍ಎ ಹೇಗೆ ಹಾಡ್ರ್ ಡ್ರೈವ್‍ನ ಸೋರ್ಸ್‍ಕೋಡ್ ಅನ್ನು ಪಡೆದುಕೊಂಡಿತು ಎಂಬುದು ಗೊತ್ತಾಗಿಲ್ಲ.
ಒಂದು ಮೂಲಗಳ ಪ್ರಕಾರ, ಎನ್ಎಸ್‍ಎ ಟೆಕ್ ಕಂಪನಿಗಳೊಂದಿಗೆ ನೇರವಾಗಿ ಅಥವಾ ತಾನು ಸಾಫ್ಟ್ ವೇರ್ ಡೆವಲಪರ್ ಎಂದು ಹೇಳಿಕೊಂಡು ಸೋಸ್ರ್ ಕೋಡ್ ಅನ್ನು ಪಡೆಯುತ್ತದೆ. ಒಮ್ಮೊಮ್ಮೆ ನಾವು ಏನೋ ಒಂದು ಮೌಲ್ಯಮಾಪನ ಮಾಡಬೇಕು. ಅದಕ್ಕಾಗಿ ಸೋಸ್ರ್ ಕೋಡ್ ಬೇಕೇ ಬೇಕು ಎಂದು ಪಟ್ಟುಹಿಡಿದು ಅದನ್ನು ಪಡೆದುಕೊಳ್ಳುತ್ತದೆ.
ಈಕ್ವೇಷನ್ ಇನ್ಫೆಕ್ಷನ್ ಎಲ್ಲೆಲ್ಲಿ ಎಷ್ಟೆಷ್ಟು?
* ಇರಾನ್- ಹಣಕಾಸು, ಸರ್ಕಾರ, ರಾಯಭಾರ ಕಚೇರಿಗಳು, ಸಂಶೋಧನಾ ಸಂಸ್ಥೆ, ಶಕ್ತಿ,
ಮೂಲಸೌಕರ್ಯ, ವಿಶ್ವವಿದ್ಯಾಲಯ, ವೈಮಾನಿಕ ಸಂಸ್ಥೆ, ಟೆಲಿಕಮ್ಯೂನಿಕೇಷನ್ಸ್ ಇತ್ಯಾದಿ.
* ರಷ್ಯಾ- ಸರ್ಕಾರ, ಸಂಶೋಧನಾ ಸಂಸ್ಥೆ, ಶಕ್ತಿ, ಮೂಲಸೌಕರ್ಯ, ವಿಶ್ವವಿದ್ಯಾಲಯ, ಸೇನೆ, ವೈಮಾನಿಕ ಸಂಸ್ಥೆ, ವೈದ್ಯಕೀಯ, ಟೆಲಿಕಮ್ಯೂನಿಕೇಷನ್ಸ್ ಇತ್ಯಾದಿ.
* ಪಾಕಿಸ್ತಾನ- ಸರ್ಕಾರ, ಸಂಶೋಧನಾ ಸಂಸ್ಥೆ, ಶಕ್ತಿ, ಮೂಲಸೌಕರ್ಯ, ವಿಶ್ವವಿದ್ಯಾಲಯ, ಸೇನೆ, ವೈಮಾನಿಕ ಸಂಸ್ಥೆ, ವೈಮಾನಿಕ, ಟೆಲಿಕಮ್ಯೂನಿಕೇಷನ್ಸ್ ಇತ್ಯಾದಿ.
* ಭಾರತ- ಸಂಶೋಧನಾ ಸಂಸ್ಥೆ, ಸೇನೆ, ವೈಮಾನಿಕ ಸಂಸ್ಥೆ.
Advertisement