ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ದೇಶ
ಆಪ್‍ಗೆ ಕ್ಲೀನ್‍ಚಿಟ್ ಕೊಟ್ಟ ಕೇಂದ್ರ!
ಆಪ್ ಪಕ್ಷಕ್ಕೆ ಬರುವ ದೇಣಿಗೆ ಹಣ ಕಾನೂನು ಬಾಹಿರವಾದದ್ದಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‍ಗೆ ಹೇಳಿದೆ...
ನವದೆಹಲಿ: ಆಪ್ ಪಕ್ಷಕ್ಕೆ ಬರುವ ದೇಣಿಗೆ ಹಣ ಕಾನೂನು ಬಾಹಿರವಾದದ್ದಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‍ಗೆ ಹೇಳಿದೆ.
ಎಎಪಿಗೆ ಬರುವ ದೇಣಿಗೆ ಹಣ ಕಾನೂನು ಬಾಹಿರವಾಗಿದೆ ಎಂದು ಕೆಲವು ದಿನಗಳ ಹಿಂದೆ ಎಮ್. ಎಲ್. ಶರ್ಮಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ನಾಲ್ಕು ನಕಲಿ ಕಂಪನಿಗಳು ಏ.24, 2014ರ ಮಧ್ಯರಾತ್ರಿಯಂದು ತಲಾ ರು.50 ಲಕ್ಷದಂತೆ, ರು.2 ಕೋಟಿಯನ್ನು ಆಪ್‍ಗೆ ಅವರ ವೆಬ್‍ಸೈಟ್ ಮೂಲಕ ದೇಣಿಗೆಯಾಗಿ ನೀಡಿತ್ತು. ಆದರೆ ಈ ಕಂಪನಿಗಳೇ ಹಲವಾರು ವರ್ಷಗಳಿಂದ ನಷ್ಟ ಅನುಭವಿಸುತ್ತಿರುವಾಗ ಹೇಗೆ ರು50ಲಕ್ಷವನ್ನು ದೇಣಿಗೆ ನೀಡಲು ಸಾಧ್ಯ ಎಂದು ಶರ್ಮಾ ಪಿಐಎಲ್‍ನಲ್ಲಿ ಪ್ರಶ್ನಿಸಿದ್ದರು.

