
ನವದೆಹಲಿ: ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆ ಕಟ್ಟಡದಿಂದ ಜೆಡಿಎಸ್ ಅನ್ನು ಹೊರದಬ್ಬಿರುವ ಕಾಂಗ್ರೆಸ್ ಈಗ ದೆಹಲಿಯ ಅಕ್ಬರ್ ರೋಡ್‌ನಲ್ಲಿರುವ ಪ್ರಧಾನ ಕಚೇರಿಯಿಂದ ಹೊರಹೋಗಬೇಕಾದ ಸಂಕಷ್ಟಕ್ಕೆ ಸಿಲುಕಿದೆ.
ಲೀಸ್ ಅವಧಿ ಮುಕ್ತಾಯಗೊಂಡ ಹಿನ್ನೆಲೆ, ಕಚೇರಿ ತೆರವುಗೊಳಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈಗಾಗಲೇ ಪಕ್ಷಕ್ಕೆ ನೋಟಿಸ್ ನೀಡಿದೆ. ನೋಟಿಸ್‌ಗೆ ಕಾಂಗ್ರೆಸ್ ಉತ್ತರವನ್ನೂ ನೀಡಿದ್ದು, ಸರ್ಕಾರದ ಪ್ರತಿಕ್ರಿಯೆ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಹಿರಿಯ ಮುಖಂಡ ಮೋತಿಲಾಲ್ ವೊರಾ ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಕಾಂಗ್ರೆಸ್ ಇಲ್ಲೇ ಇನ್ನಷ್ಟು ದಿನ ಮುಂದುವರಿಯಲು ದಾರಿ ಹುಡುಕುತ್ತಿದ್ದೆ. ಕಾಂಗ್ರೆಸ್ ಜೂ.25, 2010ರಂದು ರೌಸ್ ಅವೆನ್ಯೂ ರಸ್ತೆಯಲ್ಲಿರುವ 9-ಎ ಭೂಮಿ ಸ್ವಾಧೀನ ಪಡಿಸಿಕೊಂಡ ಬಳಿಕ ಅಕ್ಬರ್ ರಸ್ತೆಯಲ್ಲಿರುವ ಬಂಗ್ಲೆಯ ಲೀಸ್ ಅವಧಿಯನ್ನು ಮೂರು ವರ್ಷ ಮುಂದುವರಿಸಿತ್ತು. ಆ ಅವಧಿ ಜೂ.26, 2010ರಂದು ರೌಸ್ ಅವೆನ್ಯೂ ರಸ್ತೆಯಲ್ಲಿರುವ 9-ಎ ಭೂಮಿ ಸ್ವಾಧೀನಪಡಸಿಕೊಂಡ ಬಳಿಕ ಅಕ್ಬರ್ ರಸ್ತೆಯಲ್ಲಿರುವ 9-ಎ ಭೂಮಿ ಸ್ವಾಧೀನಪಡಿಸಿಕೊಂಡ ಬಳಿಕ ಅಕ್ಬರ್ ರಸ್ತೆಯಲ್ಲಿರುವ ಬಂಗ್ಲೆಯ ಲೀಸ್ ಅವಧಿಯನ್ನು ಮೂರು ವರ್ಷ ಮುಂದುವರಿಸಿತ್ತು. ಆ ಅವಧಿ ಜೂ.26, 2013ಕ್ಕೆ ಮುಕ್ತಾಯಗೊಂಡಿತ್ತು.
ಈ ವೇಳೆಗೆ ಯುಪಿಎ ಸರ್ಕಾರ, ಲೀಸ್ ಅವಧಿಯನ್ನು ಇನ್ನಷ್ಟು ದಿನ ವಿಸ್ತರಿಸಿತ್ತು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ದಿ ಸಚಿವಾಲಯವು ನೋಟಿಸ್ ನೀಡಿದ್ದು ಅದರಲ್ಲಿ ಜೂ.27ರಿಂದ ಇಲ್ಲಿಯವರೆಗೆ ಈ ಕಟ್ಟಡ ಇಟ್ಟುಕೊಂಡದ್ದಕ್ಕಾಗಿ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಸೂಚಿಸಿ, ಶೀಘ್ರದಲ್ಲೇ ಕಚೇರಿ ತೆರವುಗೊಳಿಸುವಂತೆ ನಿರ್ದೇಶಿಸಿದೆ. 1978ರಿಂದ ಕಾಂಗ್ರೆಸ್ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗಮನಾರ್ಹ ಅಂಶವೆಂದರೆ ಪಕ್ಷದ ಅಧ್ಯಕ್ಷೆ ಸೋನಿಯಾರ ನಿವಾಸ 10 ಜನಪಥ್ ಕಾಂಗ್ರೆಸ್ ಕಚೇರಿಗೆ ತಾಗಿಕೊಂಡೇ ಇದೆ.
Advertisement