ನಗರ ಪ್ರವೇಶಕ್ಕೆ ಹೈದ್ರಾಬಾದ್ ಸಂಸದ ಒವೈಸಿಗೆ ನಿರ್ಬಂಧ

ಶಿವಾಜಿನಗರದ ಛೋಟಾ ಮೈದಾನದ್ಲಲಿ ಫೆ.21ರಂದು ನಡೆಯಲಿರುವ ಎಂಐಎಂ ಸಮಾವೇಶದಲ್ಲಿ ಭಾಗವಹಿಸಲು ಹೈದ್ರಾಬಾದ್ ಸಂಸದ ಅಸಾದುದ್ದೀನ್ ಒವೈಸಿಗೆ...
ನಗರ ಪ್ರವೇಶಕ್ಕೆ ಹೈದ್ರಾಬಾದ್ ಸಂಸದ ಒವೈಸಿಗೆ ನಿರ್ಬಂಧ

ಬೆಂಗಳೂರು: ಶಿವಾಜಿನಗರದ ಛೋಟಾ ಮೈದಾನದ್ಲಲಿ ಫೆ.21ರಂದು ನಡೆಯಲಿರುವ ಎಂಐಎಂ ಸಮಾವೇಶದಲ್ಲಿ ಭಾಗವಹಿಸಲು ಹೈದ್ರಾಬಾದ್ ಸಂಸದ ಅಸಾದುದ್ದೀನ್ ಒವೈಸಿಗೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಆದೇಶಿಸಿದ್ದಾರೆ.

ಫೆ.9ರಿಂದ 25ವರೆಗೆ ಅಸಾದುದ್ದೀನ್ ಒವೈಸಿ ಬೆಂಗಳೂರು ಪ್ರವೇಶಿಸುವಂತಿಲ್ಲ. ಪ್ರಚೋದನಕಾರಿ ಭಾಷಣ ಹಿನ್ನೆಲೆ ಹೊಂದಿರುವ ಒವೈಸಿ ವಿರುದ್ಧ ಹೈದ್ರಾದಾಬ್ ಮತ್ತು ಮಹಾರಾಷ್ಟ್ರದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪ್ರಚೋದನಾಕಾರಿ ಭಾಷಣ ಹಾಗೂ ಹೇಳಿಕೆಯಿಂದಾಗಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ನಿಷೇಧ ವಿಧಿಸಲಾಗಿದೆ. ಫೆ.21ರಂದು ಮಧ್ಯಾಹ್ನ 3ರಿಂದ 6ರವರೆಗೆ ಎಂಐಎಂ ಪಕ್ಷದ ಸಮಾವೇಶ ನಡೆಸಲು ಅನುಮತಿ ನೀಡಲಾಗಿದೆ.

ವಿಡಿಯೋ, ಆಡಿಯೋ ಸೇರಿದಂತೆ ಎಲ್ಲ ರೀತಿಯ ಭಾಷಣ ಪ್ರಸಾರ ನಿರ್ಬಂಧಿಸಲಾಗಿದೆ. ಷರತ್ತು ಉಲ್ಲಂಘಿಸಿದರೆ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದು ಅಲೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಒವೈಸಿ ಪ್ರವೇಶ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ ಎಂದು ಎಂಐಎಂ ಮುಖಂಡರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com