ನ್ಯಾಯಾ­ಧೀಶರಿಗೆ ಲಂಚ ನೀಡಿದ ಪ್ರಕರಣ: ರೆಡ್ಡಿಗೆ ಸುಪ್ರೀಂ ತರಾಟೆ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆಯಲು ಹೈದರಾ­ಬಾದ್‌ನ ಸಿಬಿಐ ನ್ಯಾಯಾ­ಧೀಶರಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ...
ಜಿ.ಜನಾರ್ದನ ರೆಡ್ಡಿ
ಜಿ.ಜನಾರ್ದನ ರೆಡ್ಡಿ

ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆಯಲು ಹೈದರಾ­ಬಾದ್‌ನ ಸಿಬಿಐ ನ್ಯಾಯಾ­ಧೀಶರಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಜಿ. ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಹೈದರಾಬಾದ್‌ ಸಿಬಿಐ ನ್ಯಾಯಾ­ಧೀಶರಿಗೆ ಲಂಚ ನೀಡಿದ ಆರೋಪಕ್ಕೆ ಒಳಗಾಗಿರುವ ಜನಾರ್ದನ ರೆಡ್ಡಿ ಅವರನ್ನು ಕಟುವಾಗಿ ಟೀಕಿಸಿರುವ ಸುಪ್ರೀಂ ಕೋರ್ಟ್‌, ನ್ಯಾಯಾಂಗವನ್ನು ಹಣದ ಆಮಿಷಕ್ಕೆ ಒಳಪಡಿಸುವ ಯಾವುದೇ ಪ್ರಯತ್ನ­ಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.

ಜನಾರ್ದನರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆ­ಯಲು ಲಂಚ ನೀಡಿದ ಪ್ರಕ­ರಣದ ವಿಚಾರಣೆ ನಡೆಸಿದ ನ್ಯಾಯ­ಮೂರ್ತಿ. ಟಿ.ಎಸ್‌. ಠಾಕೂರ್‌ ಮತ್ತು ನ್ಯಾಯಧೀಶ ಆರ್‌.ಎಫ್‌. ನಾರಿ­ಮನ್‌ ಅವರನ್ನೊಳಗೊಂಡ ನ್ಯಾಯಾಪೀಠ ಕಡೇ ಪಕ್ಷ ನ್ಯಾಯಾಂಗ­ವಾದರೂ ಭ್ರಷ್ಟಾಚಾರ ಮುಕ್ತವಾಗಿ ಉಳಿಯದಿದ್ದರೆ ಹೇಗೆ? ಎಂದು ಕೇಳಿದೆ.

ನ್ಯಾಯಾಧೀಶರಿಗೇ ಲಂಚ ಕೊಡುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನೇ ತಲೆ ಕೆಳಗೆ ಮಾಡುವ ಕೆಲಸ ಮಾಡಿದ್ದೀರಿ. ನ್ಯಾಯಾಂಗವನ್ನು ಭ್ರಷ್ಟ­ಗೊ­ಳಿಸು­­ವಂಥ ಪ್ರಯತ್ನ­ಗಳನ್ನು ಸಹಿಸುವುದಿಲ್ಲ. ಕನಿಷ್ಠ ಪಕ್ಷ ನ್ಯಾಯಾಂಗ­ವಾದರೂ ಪ್ರಾಮಾಣಿಕವಾಗಿ ಉಳಿಯ­ಬೇಕು ಎಂದು ನ್ಯಾಯಾಪೀಠ ತಿಳಿಸಿದೆ.

ಸಾಕಷ್ಟು ಹಣ ಹೊಂದಿ­­ರುವ ನೀವು ನ್ಯಾಯಾಧೀಶರಿಗೂ  ಆಮಿಷ­ಒಡ್ಡು­ತ್ತಿ­ದ್ದೀರಿ ಎಂದು ರೆಡ್ಡಿ ಪರ ಹಿರಿಯ ವಕೀಲ ಪಿ. ವಿಶ್ವನಾಥ ಶೆಟ್ಟಿ ಅವರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಈ ಪ್ರಕರಣ ನಡೆದಾಗ ತಮ್ಮ ಕಕ್ಷಿಗಾರ ಜೈಲಿನಲ್ಲಿ ಇದ್ದುದಾಗಿ ವಿಶ್ವನಾಥ ಶೆಟ್ಟಿ ವಾದಿಸಿದರು. ಅದಕ್ಕೆ ನ್ಯಾಯಾಲಯ ನೀವು ಜೈಲಿನಿಂದ ಹೊರಗೆ ಬರಲು ಹಣ ನೀಡಿದ್ದೀರಿ ಎಂದು ಖಾರವಾಗಿ ತಿರುಗೇಟು ನೀಡಿತು.

ಅಕ್ರಮ ಗಣಿಗಾರಿಕೆ ಹಾಗೂ ಲಂಚ ಪ್ರಕರಣವನ್ನು ವಿಲೀನಗೊಳಿ­ಸಬೇಕು ಎಂದು ಮನವಿ ಮಾಡಿ ರೆಡ್ಡಿ ಸಲ್ಲಿಸಿರುವ ಅರ್ಜಿ ಸಂಬಂಧ ಕೋರ್ಟ್‌, ತೆಲಂಗಾಣ ಹಾಗೂ ಸಿಬಿಐಗೆ ನೋಟಿಸ್‌ ಜಾರಿ ಮಾಡಿತು.

ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಸಿಬಿಐ ನ್ಯಾಯಾಧೀಶ ಪಟ್ಟಭಿರಾಮರಾವ್‌ ಅವರಿಗೆ ಲಂಚ ನೀಡಿದ ಆರೋಪಕ್ಕೆ ರೆಡ್ಡಿ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಧೀಶರನ್ನು ಸಸ್ಪೆಂಡ್‌ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com