ಒಬಾಮ ಕಾಪ್ಟರ್ ಗೆ ಹೈದರಾಬಾದ್ ಕಂಪನಿಯ ಕ್ಯಾಬಿನ್!

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸದ್ಯದಲ್ಲೇ ಭಾರತದಲ್ಲಿ ನಿರ್ಮಿತ ಕ್ಯಾಬಿನ್ ಇರುವ ಕಾಪ್ಟರ್ನಲ್ಲಿ ಹಾರಾಟ ನಡೆಸಲಿದ್ದಾರೆ...
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ

ನವದೆಹಲಿ/ಬೆಂಗಳೂರು: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸದ್ಯದಲ್ಲೇ ಭಾರತದಲ್ಲಿ ನಿರ್ಮಿತ ಕ್ಯಾಬಿನ್ ಇರುವ ಕಾಪ್ಟರ್ ನಲ್ಲಿ ಹಾರಾಟ ನಡೆಸಲಿದ್ದಾರೆ.

ಹೌದು, ಅಮೆರಿಕದ ಕಾಪ್ಟರ್ ನಿರ್ಮಾಣ ಕಂಪನಿ ಸಿಕೋರ್ಸ್ಕಿ ತನ್ನ ಎಸ್ 92 ಕಾಪ್ಟರ್ ಗಳಿಗಾಗಿ 2009ರಲ್ಲಿ ಟಾಟಾ ಅಡ್ವಾನ್ಸ್ಢ್ ಸಿಸ್ಟಮ್ಸ್ ಕಂಪನಿಯೊಂದಿಗೆ ಕ್ಯಾಬಿನ್ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಂಡಿತ್ತು. ಈ ಕಾಪ್ಟರ್ ಅನ್ನು ಅಮೆರಿಕದ ಅಧ್ಯಕ್ಷರು ಸೇರಿ ವಿಶ್ವದ ಅನೇಕ ವಿವಿಐಪಿಗಳು ಬಳಸುತ್ತಾರೆ. ಟಾಟಾ ಕಂಪನಿ ಹೈದರಾಬಾದ್ ನಲ್ಲಿ ನಿರ್ಮಿಸಿದ 100ನೇ ಕ್ಯಾಬಿನ್ ಶೀಘ್ರದಲ್ಲೇ ಪೂರೈಕೆ ಆಗಲಿದೆ ಎಂದು ಸಿಕೋರ್ಸ್ಕಿ ಮಿಲಿಟರಿ ಸಿಸ್ಟಮ್ಸ್ ನ ಅಧ್ಯಕ್ಷ ಸಮೀರ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಈ 100ರಲ್ಲಿ ಒಂದು
ಕ್ಯಾಬಿನ್ ಒಬಾಮ ಓಡಾಡುವ ವಿಮಾನಕ್ಕೂ ಅಳವಡಿಸಲಾಗುವುದು ಎಂದು ಕಂಪನಿ ಉಪಾಧ್ಯಕ್ಷ  ರಾಬರ್ಟ್ ಕೊಕೊರಡಾ ಅವರು ಖಚಿತಪಡಿಸಿದ್ದಾರೆ.

ಅಮೆರಿಕ ಸರ್ಕಾರ ಕಳೆದ ವರ್ಷ ಸಿಕೋರ್ಸ್ಕಿ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಅಧ್ಯಕ್ಷರ ಹಳೆಯ ಕಾಪ್ಟರ್ಗಳನ್ನು ಬದಲಾಯಿಸಿ ಹೊಸದಾಗಿ 21 ಹೊಸ ಕಾಪ್ಟರ್ ಗಳನ್ನು ಕಂಪನಿ ಪೂರೈಸಬೇಕಿದೆ. ಅಮೆರಿಕ ಅಧ್ಯಕ್ಷರು ಎಸ್92 ಕಾಪ್ಟರ್ ಅನ್ನೇ ಬಳಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com