
-ಜೇಟ್ಲಿ ಬಜೆಟ್ ಸಹ ಗೌಪ್ಯವಾಗಿ ಉಳಿದಿಲ್ಲ
ನವದೆಹಲಿ: ಕಾರ್ಪೊರೇಟ್ ಬೇಹುಗಾರಿಕೆಯ ಕಬಂಧ ಬಾಹು ಪೆಟ್ರೋಲಿಯಂ ಸಚಿವಾಲಯವನ್ನಷ್ಟೇ ಅಲ್ಲ, ರಕ್ಷಣೆ, ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವಾಲಯಗಳವರೆಗೂ ಚಾಚಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಬಜೆಟ್ ಭಾಷಣದ ಮಾಹಿತಿಯಿದ್ದ ದಾಖಲೆಯೂ ರಹಸ್ಯವಾಗಿ ಉಳಿದಿಲ್ಲ!
ಪೆಟ್ರೋಲಿಯಂ ಸಚಿವಾಲಯದ ದಾಖಲೆಗಳ ಸೋರಿಕೆಗೆ ಸಂಬಂಧಿಸಿ ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಈ ವಿಚಾರ ಉಲ್ಲೇಖಿಸಲಾಗಿದೆ. ಅನೇಕ ಗೋಪ್ಯ ದಾಖಲೆಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ದಾಖಲೆಗಳ ಪ್ರತಿಗಳನ್ನು ಕೂಡ ಕಾರ್ಪೊರೇಟ್ ಕಂಪನಿಗಳು ಹಾಗೂ ಎನರ್ಜಿ ಕನ್ಸಲ್ಟೆಂಟ್‌ಗಳಿಗೆ ನೀಡಲಾಗುತ್ತಿತ್ತು ಎಂದು ಆರೋಪಿಗಳಉ ಬಾಯಿಬಿಟ್ಟಿ ದ್ದಾರೆ. ಆರೋಪಿಗಳಲ್ಲಿದ್ದ 3 ಡೈರಿಗಳಲ್ಲಿ ಕೆಲ ಪ್ರಮುಖ ದೂರವಾಣಿ ಸಂಖ್ಯೆಗಳು ಸಿಕ್ಕಿರುವುದಾಗಿ ಹೇಳಿದ್ದಾರೆ.
ಮೊದಲೇ ಎಚ್ಚರಿಸಿದ್ದರು
ಕೆಲ ತಿಂಗಳ ಹಿಂದೆ ದಾಖಲೆಗಳು ಕಳವಾಗುತ್ತಿರುವ ಬಗ್ಗೆ ಅಧಿಕಾರಿಯೊಬ್ಬರು ಸಚಿವಾಲಯಕ್ಕೆ ಎಚ್ಚರಿಕೆ ನೀಡಿದ್ದರು. ಒಂದು ದಿನ ಬೆಳಗ್ಗೆ ಜಂಟಿ ಕಾರ್ಯದರ್ಶಿ ಗಿರಿಧರ್ ಅರ್ಮಾನೆ ಕೋಣೆಯಲ್ಲಿದ್ದ ರಹಸ್ಯ ದಾಖಲೆಗಳು ಜೆರಾಕ್ಸ್ ಯಂತ್ರದ ಮೇಲೆ ಕಂಡಿದ್ದು, ಶಂಕೆಗೆ ಕಾರಣವಾಗಿತ್ತು.
4 ಮಂದಿ ಪೊಲೀಸ್ ವಶಕ್ಕೆ
ಕಾರ್ಪೋರೇಟ್ ಕಂಪನಿಗಳಿಗೆ ರಹಸ್ಯ ದಾಖಲೆ ಒದಗಿಸಿದ ನಾಲ್ವರು ಆರೋಪಿಗಳನ್ನು ಫೆ.23ರವರೆಗೆ ಪೊಲೀಸ್ ವಶಕ್ಕೊಪ್ಪಿಸಿ ದೆಹಲಿಯ ಕೋರ್ಟ್ ಆದೇಶ ಹೊರಡಿಸಿದೆ. ಮತ್ತೆ ಮೂವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಮತ್ತೆ 7 ಮಂದಿ ಬಂಧನ
ಪ್ರಕರಣ ಸಂಬಂಧ ಶುಕ್ರವಾರ ರಾತ್ರಿ ಆರ್‌ಐಎಲ್, ರಿಲಯನ್ಸ್ ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್, ಎಸ್ಸಾರ್, ಕೈರ್ನ್ಸ್, ಇತರೆ ಕಂಪನಿಗಳ 5 ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 12ಕ್ಕೇರಿದೆ. ಇವರಲ್ಲಿ ಒಬ್ಬಾತ ಶಂತನು ಸೈಕಿಯಾ ಮಾಜಿ ಪತ್ರಕರ್ತ
ಹೇಗೆ ನಡೆಯುತ್ತಿತ್ತು?
ತೈಲ ಸಚಿವಾಲಯದ ನೌಕರನೇ ಪ್ರಕರಣದ ಪ್ರಮುಖ ಪಾತ್ರಧಾರಿ. ದಾಖಲೆಗಳನ್ನು ಕದಿಯಲು ಈತ ಏನೇನು ಮಾಡಿದ್ದ ಗೊತ್ತಾ?
Advertisement