
ಪಾಟ್ನಾ: ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಮೊಮ್ಮಗ, ಸಂಸದ ತೇಜ್ ಪ್ರತಾಪ್ ಯಾದವ್ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿಯ ಪುತ್ರಿ ರಾಜ್ ಲಕ್ಷ್ಮಿ `ತಿಲಕ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪಾಲ್ಗೊಂಡರು.
ಈ ವಿವಾಹ ಪೂರ್ವ ಸಂಪ್ರದಾಯದಲ್ಲಿ ಮೋದಿ ಹಾಗೂ ರಾಜಕೀಯ ವಿರೋಧಿಗಳಾದ ಲಾಲು ಹಾಗೂ ಮುಲಾಯಂ ಪರಸ್ಪರ ಕೈಹಿಡಿದುಕೊಂಡು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿತು. ಮುಲಾಯಂ ಪುತ್ರ ಅಖಿಲೇಶ್ ಯಾದವ್ ಸುಮಾರು 15 ನಿಮಿಷಗಳ ಕಾಲ ವೇದಿಕೆಯಲ್ಲಿ ಅಕ್ಕ ಪಕ್ಕ ಕೂತು, ಕುಶಲೋಪರಿ ವಿಚಾರಿಸಿಕೊಂಡರು. ನಟ ಅಮಿತಾಭ್ ಬಚ್ಚನ್, ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಸೇರಿದಂತೆ ಪ್ರಮುಖರಿದ್ದರು.
Advertisement