

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಕಟ್ಟಾ ಅಭಿಮಾನಿಯೊಬ್ಬ ಜಯಲಲಿತಾರನ್ನು ಮತ್ತೆ ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿ ಯೇಸುವಿನ ರೀತಿಯಲ್ಲೇ ಶಿಲುಬೆಗೇರಿದ ಘಟನೆ ನಡೆದಿದೆ.
ಅಣ್ಣಾಡಿಎಂಕೆ ಕಾರ್ಯಕರ್ತನಾಗಿರುವ ಕರಾಟೆ ಪಟು ಶಿಹಾನ್ ಹುಸೈನಿ ಮರದ ಶಿಲುಬೆಯಲ್ಲಿ ಏಸುವಿನ ರೀತಿ ನಿಂತು ಕಾಲು ಮತ್ತು ಕೈಗಳಿಗೆ 6 ಇಂಚಿನ ಮೊಳೆ ಹೊಡೆಸಿಕೊಂಡಿದ್ದಾನೆ.
ತೀವ್ರ ನೋವಿನಲ್ಲೂ ಆತ ಸುಮಾರು 6 ನಿಮಿಷಗಳ ಕಾಲ ಶಿಲುಬೆಯಲ್ಲೇ ಇದ್ದ. ಬಳಿಕ ಹುಸೈನಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.
Advertisement