ಮದರ್ ತೆರೇಸಾ ಮತಾಂತರ ಹುನ್ನಾರ: ಭಾಗವತ್ ಹೇಳಿಕೆಗೆ ಶಿವಸೇನೆ ಸಮರ್ಥನೆ

ಉದ್ದವ್ ಠಾಕ್ರೆ
ಉದ್ದವ್ ಠಾಕ್ರೆ

ಮುಂಬೈ: ನೊಬಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ಸೇವೆಯ ಹಿಂದೆ ಮತಾಂತರ ಹುನ್ನಾರವಿತ್ತು ಎಂಬ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ರ ವಿವಾದಾತ್ಮಕ ಹೇಳಿಕೆಯನ್ನು ಶಿವಸೇನೆ ಸಮರ್ಥಿಸಿಕೊಂಡಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಭಾರತಕ್ಕೆ ಬಂದ ಎಲ್ಲಾ ಮಿಷನರಿಗಳ ಉದ್ದೇಶ ಮತಾಂತರವೇ ಆಗಿತ್ತು. ಹೀಗಾಗಿ ಮೋಹನ್ ಭಾಗವತ್ ರ ಹೇಳಿಕೆ ಸರಿಯಾಗಿದೆ ಎಂದು ಹೇಳಿಕೊಂಡಿದೆ.

ರಾಜಸ್ಥಾನದ ಭರತ್‌ಪುರ್‌ದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಮದರ್ ತೆರೇಸಾ ಅವರ ಸೇವೆ ನಿಸ್ವಾರ್ಥವಾಗಿತ್ತು. ಆದರೆ ಆ ಸೇವೆಯ ಹಿಂದಿನ ಉದ್ದೇಶ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದೇ ಆಗಿತ್ತು ಎಂದು ಹೇಳಿದ್ದರು. ಈ ಹೇಳಿಕೆಗೆ ದೇಶದೆಲ್ಲಡೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಸೇರಿದಂತೆ ಪ್ರತಿಪಕ್ಷಗಳು ಭಾಗವತ್ ವಿರುದ್ಧ ಹಾರಿಹಾಯ್ದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com