• Tag results for conversion

ಮತಾಂತರ ನಿಷೇಧ ಕಾಯ್ದೆ ವಿರುದ್ಧ ಪಿಐಎಲ್: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ರಾಜ್ಯ ಸರ್ಕಾರ ಹೊರಡಿಸಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಕಾಯ್ದೆಗೆ(ಮತಾಂತರ ನಿಷೇಧ) ಸುಗ್ರೀವಾಜ್ಞೆ, 2022 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ...

published on : 22nd July 2022

ಧಾರ್ಮಿಕ ಮತಾಂತರಗಳಿಂದ ಭಾರತವನ್ನು ಕಾಪಾಡಬೇಕು: ಮೋಹನ್ ಭಾಗವತ್

ಭಾರತವನ್ನು ರಕ್ಷಿಸಲು ಧಾರ್ಮಿಕ ಮತಾಂತರಗಳು ನಿಲ್ಲಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

published on : 13th July 2022

ಬೆಂಗಳೂರಿನ ರೋಹಿಂಗ್ಯಾ ಶಿಬಿರದಲ್ಲಿ ಧಾರ್ಮಿಕ ಮತಾಂತರ!!

ಬೆಂಗಳೂರಿನ ರೋಹಿಂಗ್ಯಾ ಶಿಬಿರದಲ್ಲಿ ಧಾರ್ಮಿಕ ಮತಾಂತರ ನಡೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಹತ್ತಾರು ಕುಟುಂಬಗಳು ಮತಾಂತರವಾಗಿವೆ ಎಂದು ಹೇಳಲಾಗಿದೆ.

published on : 24th June 2022

ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಮತಾಂತರ: ಹಿಂದು ಜಾಗರಣ ವೇದಿಕೆ ಆರೋಪ; ಪೊಲೀಸರಿಂದ ನಿರಾಕರಣೆ

ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಶನಿವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

published on : 6th June 2022

ಮತಾಂತರ ಆರೋಪ: ಕೊಡಗಿನಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲು!!

ಮತಾಂತರ ಕಾಯ್ದೆಗೆ ರಾಜ್ಯಪಾಲಕ ಅಂಕಿತ ಬಿದ್ದ ಬೆನ್ನಲ್ಲೇ ಇತ್ತ ಕೊಡಗಿನಲ್ಲಿ ದಂಪತಿ ವಿರುದ್ಧ ಬಲವಂತದ ಮತಾಂತರ ಪ್ರಕರಣ ದಾಖಲಾಗಿದೆ.

published on : 18th May 2022

ತೀವ್ರ ವಿರೋಧದ ನಡುವೆ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ವಿಧಾನಸಭೆಯ ಅಂಗೀಕಾರ ಪಡೆದಿರುವ ಸ್ವರೂಪದಲ್ಲೇ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಮೇ 12ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. 

published on : 18th May 2022

ಆಮಿಷ ಹಾಗೂ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ: ಸಚಿವ ಆರಗ ಜ್ಞಾನೇಂದ್ರ

ಮತಾಂತರ ನಿಷೇಧ ಕಾಯಿದೆ ಯಾವುದೇ ಧರ್ಮದ ವಿರುದ್ಧ ರೂಪಿತವಾಗಿಲ್ಲ. ಆದರೆ ಯಾವುದೇ ರೀತಿಯ ಆಮಿಷ ಅಥವಾ ಬಲವಂತದ  ಮತಾಂತರಕ್ಕೆ ಅವಕಾಶವಿಲ್ಲ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು ಸ್ಪಷ್ಟಪಡಿಸಿದ್ದಾರೆ.

published on : 17th May 2022

ಮತಾಂತರ ತಡೆ ಕಾನೂನು ಜಾರಿಗೆ ಮುಂದಿನ ಅಧಿವೇಶನದವರೆಗೆ ಕಾಯಲು ಸಾಧ್ಯವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮಾರ್ಗ ಹಿಡಿದಿದ್ದು, ಈ ಸಂಬಂಧ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಈ ನಡುವಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಮತಾಂತರ ತಡೆ ಕಾನೂನು ಜಾರಿಗೆ ಮುಂದಿನ ಅಧಿವೇಶನದವರೆಗೆ ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

published on : 15th May 2022

ಮತಾಂತರ ನಿಷೇಧ ಕಾಯ್ದೆ ಸಮಾಜದಲ್ಲಿ ಇನ್ನಷ್ಟು ಒಡಕು ಸೃಷ್ಟಿಸಲಿದೆ: ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ

ಮತಾಂತರ ನಿಷೇಧ ಕಾಯ್ದೆ ಸಮಾಜದಲ್ಲಿ ಇನ್ನಷ್ಟು ಒಡಕು ಸೃಷ್ಟಿಸಲಿದ್ದು, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಸಿಟಿ ಮಾರ್ಕೆಟ್ ಜಾಮಾ ಮಸೀದಿಯ ಮೌಲಾನಾ ಮಕ್ಸೂದ್‌ ಇಮ್ರಾನ್‌ ರಶಾದಿ ಅವರು ಹೇಳಿದ್ದಾರೆ.

published on : 15th May 2022

ಭ್ರಷ್ಟಾಚಾರ, ದುರಾಡಳಿತದಿಂದ ಬಿಜೆಪಿ ಸರ್ಕಾರ ನಿತ್ಯ ಬೆತ್ತಲೆ ಆಗುತ್ತಿದೆ: ಸಶಕ್ತ ಕಾನೂನು ಇರುವಾಗ ಹೊಸ ಕಾಯ್ದೆ ಯಾಕೆ? ಸಿದ್ದರಾಮಯ್ಯ

ಆಮಿಷ, ಒತ್ತಡ, ಬೆದರಿಕೆಗಳ ಮೂಲಕ ನಡೆಯುವ ಬಲವಂತದ ಮತಾಂತರಗಳನ್ನು ತಡೆಯಲು ನಮ್ಮ ಕಾನೂನು ಸಶಕ್ತವಾಗಿದೆ. ಹೀಗಿದ್ದಾಗ ಹೊಸ ಕಾಯ್ದೆಯ ಅವಶ್ಯಕತೆ ಏನಿದೆ? ಅಲ್ಪಸಂಖ್ಯಾತರನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶವಲ್ಲವೇ?

published on : 13th May 2022

ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಅಥವಾ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.

published on : 12th May 2022

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಶೀಘ್ರದಲ್ಲೇ ಸುಗ್ರೀವಾಜ್ಞೆ: ಕೋಟ ಶ್ರೀನಿವಾಸ ಪೂಜಾರಿ

ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ-ಮತಾಂತರ ನಿಷೇಧ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಜ್ಯದಲ್ಲಿ ಕಾಯ್ದೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಾಗುತ್ತದೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಹೇಳಿದ್ದಾರೆ.

published on : 9th April 2022

ಮಗುವಿಗೆ ಚಿಕಿತ್ಸೆ ಕೊಡಿಸಲು ಮತಾಂತರಗೊಳ್ಳಲು ನಿರ್ಧರಿಸಿದ್ದ ಕುಟುಂಬಕ್ಕೆ ಆಸ್ಪತ್ರೆ ನೆರವು!

ಅಪರೂಪದ ಕಾಯಿಲೆಯಾಗಿರುವ ಥಲಸ್ಸಿಮಿಯಾದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಳು ನಿರ್ಧರಿಸಿದ್ದ ಬಡ ಕುಟುಂಬವೊಂದಕ್ಕೆ ಬಿಎಲ್‌ಡಿಇ ಆಸ್ಪತ್ರೆ ನೆರವಿನ ಹಸ್ತ ಚಾಚಿದೆ.

published on : 28th March 2022

'ಮತಾಂತರ ನಿಷೇಧ ಕಾಯಿದೆ ಅಸಂವಿಧಾನಿಕ': ವಿಧಾನಸಭೆಯಲ್ಲಿ ತೀವ್ರ ಗದ್ದಲ

ಮತಾಂತರ ನಿಷೇಧ ಕಾಯಿದೆ ಅಸಂವಿಧಾನಿಕ ಎಂದು ವಿನಿಶಾ ನಿರೋ ಹೇಳಿಕೆ ನೀಡಿದ್ದಾರೆಂಬ ವಿಚಾರಕ್ಕೆ ಕುರಿತಂತೆ ವಿಧಾನಸಭೆಯಲ್ಲಿ ಇಂದು ವಾಕ್ಸಮರಕ್ಕೆ ಕಾರಣವಾಯಿತು.

published on : 25th March 2022

ಮತಾಂತರ ವಿರೋಧಿ ಕಾಯ್ದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ವಾರ್!

ಮತಾಂತರ ಬಿಲ್ ವಾಪಸ್ ಪಡೆಯೋ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಟ್ವೀಟ್ ವಾರ್ ನಡೆಸಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡಿ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

published on : 18th March 2022
1 2 3 4 5 6 > 

ರಾಶಿ ಭವಿಷ್ಯ