
ಯಾದಗಿರಿ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬವೊಂದು ಇದೀಗ ಹಿಂದೂ ಧರ್ಮಕ್ಕೆ ಘರ್ ವಾಸ್ಸಿ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗಿರಿನಗರ ಕಾಲೊನಿಯಲ್ಲಿರುವ ಬುಡ್ಡ ಜಂಗಮ ಸಮಾಜದ ವೆಂಕಟೇಶ್ ಎಂಬುವರು ತಮ್ಮ ಕುಟುಂಬದ ಸಮೇತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದು, ಇದೀಗ ಮರಳಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಇದಕ್ಕೆ ಕಾರಣವಾಗಿದ್ದು ಆಂಜನೇಯ. ಹೌದು...ಕನಸಿನಲ್ಲಿ ಆಂಜನೇಯ ಪ್ರತ್ಯಕ್ಷನಾಗಿ, ಹಿಂದೂ ಧರ್ಮಕ್ಕೆ ಮರಳಿ ಬರುವಂತೆ ಹೇಳಿದ್ದು ಇದೇ ಕಾರಣಕ್ಕೆ ಮರಳಿ ಬಂದಿದ್ದಾಗಿ ವೆಂಕಟೇಶ್ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಹಿಂದೂ ಧರ್ಮ ತೊರೆದಿದ್ದ ವೆಂಕಟೇಶ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ವೆಂಕಟೇಶ್ ಕುಟುಂಬಕ್ಕೆ ಮೇಲಿಂದ ಮೇಲೆ ಪೆಟ್ಟು ಬೀಳಲು ಆರಂಭಿಸಿತಂತೆ. ತಾನು ಯಾವುದು ಕೈಹಿಡಿತಿರಲಿಲ್ಲವಂತೆ. ಇದರ ನಡುವೆ ವೆಂಕಟೇಶ್ ಕನಸಿನಲ್ಲಿ ಆಂಜನೇಯ ಸ್ವಾಮಿ ಬರುತ್ತಿದ್ದನಂತೆ. ಹಿಂದೂ ಧರ್ಮಕ್ಕೆ ಮರಳುವಂತೆ ಆದೇಶ ನೀಡುತ್ತಿದ್ದನಂತೆ. ಇದೇ ಕಾರಣಕ್ಕೆ ಇದೀಗ ವೆಂಕಟೇಶ್ ಕ್ರಿಶ್ಚಿಯನ್ ಧರ್ಮ ತೊರೆದು, ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದಾಗಿ ಹೇಳಿದ್ದಾರೆ.
Advertisement