ರಾಮಾಯಣ 4,000 ಕೋಟಿ ರೂಪಾಯಿ ಬಜೆಟ್ ಮರಳಿ ಗಳಿಸಬಲ್ಲದೇ? 'ಕೈಕೇಯಿ' ಪಾತ್ರಧಾರಿ ಲಾರಾ ದತ್ತಾ ಹೇಳಿದ್ದೇನು?

ರಾಮಾಯಣ'ದಲ್ಲಿ ರಾಣಿ ಕೈಕೇಯಿ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿರುವ ಲಾರಾ ದತ್ತಾ, ಚಿತ್ರದ ಬಂಡವಾಳ ಮರುಗಳಿಕೆಯ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
 Lara Dutta
ಲಾರಾ ದತ್ತಾ
Updated on: 

ನಿತೇಶ್ ತಿವಾರಿ 'ರಾಮಾಯಣ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಸಂಚಲನ ಸೃಷ್ಟಿಸಿದೆ. ಇಂದಿನ ವರದಿಯ ಪ್ರಕಾರ, ಈ ಚಿತ್ರವು ಜಾಗತಿಕ ಮಟ್ಟದಲ್ಲಿ 1,400 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದ್ದರೆ, ಭಾರತದಲ್ಲಿ 750 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿದೆ.

4,000 ಕೋಟಿ ರೂಪಾಯಿಗಳ ಬಜೆಟ್ ಹೊಂದಿರುವ ಈ ಚಿತ್ರವು, ತನ್ನ ವೆಚ್ಚವನ್ನು ಮರಳಿ ಗಳಿಸಲು ಸಾಧ್ಯವೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ನಮಿತ್ ಮಲ್ಹೋತ್ರಾ ಅವರ ಬೆಂಬಲದೊಂದಿಗೆ ನಿರ್ಮಾಣವಾಗಿರುವ ಈ ಎರಡು ಭಾಗಗಳ ಚಿತ್ರವನ್ನು ಅತ್ಯಂತ ಬೃಹತ್ ಮೊತ್ತದ ಬಜೆಟ್‌ನಲ್ಲಿ ರೂಪಿಸಲಾಗಿದೆ.

'ರಾಮಾಯಣ'ದಲ್ಲಿ ರಾಣಿ ಕೈಕೇಯಿ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿರುವ ಲಾರಾ ದತ್ತಾ, ಚಿತ್ರದ ಬಂಡವಾಳ ಮರುಗಳಿಕೆಯ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಚಾನೆಲ್ ವೊಂದರ ಜೊತೆ ಮಾತನಾಡಿರುವ ಅವರು, ಜಗತ್ತಿನ ಬೇರೆಲ್ಲೆಡೆ ನಿರ್ಮಾಣವಾದ ಅತ್ಯುತ್ತಮ ಚಲನಚಿತ್ರಗಳ ಸಾಲಿನಲ್ಲಿ, ನಾವೂ ಕೂಡ ದೈತ್ಯ ಶಕ್ತಿಯಂತೆ ಎದ್ದು ನಿಂತಿದ್ದೇವೆ.

ಟೀಕಿಸುವವರ ಮತ್ತು ಸಂಶಯ ವ್ಯಕ್ತಪಡಿಸುವವರ ಮಾತುಗಳನ್ನು ಕಡೆಗಣಿಸಿ, ತಮ್ಮ ದೃಷ್ಟಿಕೋನದ ಮೇಲೆ ಗಮನ ಕೇಂದ್ರೀಕರಿಸಿ ಮುನ್ನಡೆಯಲು ಅಪಾರ ಆಂತರಿಕ ಶಕ್ತಿಯ ಅಗತ್ಯವಿರುತ್ತದೆ ಎಂದಿದ್ದಾರೆ.

 Lara Dutta
ಬಾಕ್ಸ್ ಆಫೀಸ್ ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ 'ರಾಮಾಯಣ': ಜಾಗತಿಕವಾಗಿ ₹1,400 ಕೋಟಿ ಕಲೆಕ್ಷನ್!

ಹಾಗಾದರೆ, ಈ ಚಿತ್ರವು ತನ್ನ ಬಂಡವಾಳವನ್ನು ಮರಳಿ ಗಳಿಸುತ್ತದೆಯೇ? ಖಂಡಿತವಾಗಿಯೂ ಗಳಿಸುತ್ತದೆ ಎಂದು ನನಗೆ ದೃಢವಾದ ನಂಬಿಕೆಯಿದೆ. ಕೇವಲ ಬಾಕ್ಸ್ ಆಫೀಸ್ ಗಳಿಕೆಯ ಮೂಲಕವಷ್ಟೇ ಅಲ್ಲದೆ, ನಮಿತ್ ಅವರು ಈ ಚಿತ್ರಕ್ಕಾಗಿ ರೂಪಿಸಿರುವ ಇತರ ಯೋಜನೆಗಳ ಮೂಲಕವೂ ಇದು ಸಾಧ್ಯವಾಗಲಿದೆ. ಇದು ಕೇವಲ ಬಂಡವಾಳವನ್ನು ಮರಳಿ ಗಳಿಸುವುದಲ್ಲ, ಬದಲಾಗಿ ಆ ಮೊತ್ತವನ್ನು ಮೀರಿ ಭಾರಿ ಯಶಸ್ಸನ್ನು ಕಾಣಲಿದೆ ಎಂದು ನಾನು ಭಾವಿಸುತ್ತೇನೆ.

ಇದು ಅದ್ಭುತ ಎಂದು ನಾನು ಹೇಳುತ್ತೇನೆ. ಕೇವಲ ಮಾತನಾಡುವುದಷ್ಟೇ ಅಲ್ಲದೆ, ಅದನ್ನು ಕಾರ್ಯರೂಪಕ್ಕೆ ತರಲು ಮತ್ತು ಇಂತಹದೊಂದು ಸೃಷ್ಟಿಯನ್ನು ಮಾಡಲು ಅಪಾರ ಧೈರ್ಯ ಬೇಕಾಗುತ್ತದೆ. ಈ ಚಿತ್ರದಲ್ಲಿ ನಟಿಯಾಗಿರುವುದರ ಜೊತೆಗೆ, ಒಬ್ಬ ಭಾರತೀಯಳಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ.

ಪ್ರೀಮಿಯರ್‌ನಲ್ಲಿ ಈ ಚಿತ್ರವನ್ನು ನೋಡಿದಾಗ ನನಗೆ ಹೆಮ್ಮೆ ಎನಿಸಿತು. ಪ್ರಪಂಚದಾದ್ಯಂತ ಇರುವ ಭಾರತೀಯರು ಇಂದು ಇದೇ ಭಾವನೆಯನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಚಿತ್ರಮಂದಿರಕ್ಕೆ ಹೋಗಿ, ಈ ಸಿನಿಮಾ ನೋಡಿ ಹೊರಬರುವ ಪ್ರತಿಯೊಬ್ಬರೂ ಇದನ್ನೇ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X