ಬಿಜೆಪಿಗೆ ಹರಿದು ಬಂದ ದೇಣಿಗೆ ಬರೋಬ್ಬರಿ ರು. 157.84 ಕೋಟಿ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಹರಿದು ಬಂದ ದೇಣಿಗೆಯಲ್ಲಿ ಶೇ.92ರಷ್ಟು ಹಣವನ್ನು ಖಾಸಗಿ ಸಂಸ್ಥೆಗಳೇ ನೀಡಿವೆ...
ಬಿಜೆಪಿಗೆ ಹರಿದು ಬಂದ ದೇಣಿಗೆ ಬರೋಬ್ಬರಿ ರು. 157.84 ಕೋಟಿ

ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಹರಿದು ಬಂದ ದೇಣಿಗೆಯಲ್ಲಿ ಶೇ.92ರಷ್ಟು ಹಣವನ್ನು ಖಾಸಗಿ ಸಂಸ್ಥೆಗಳೇ ನೀಡಿವೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಾರತಿ ಗ್ರೂಪ್ಸ್‌ನ ಸತ್ಯ ಎಲೆಕ್ಟೋರಲ್ ಟ್ರಸ್ಟ್, ಸ್ಟೆರ್ಲೈಟ್ ಇಂಡಸ್ಟ್ರೀಸ್ ಮತ್ತು ಕೈರ್ನ್ ಇಂಡಿಯಾ ಸೇರಿದಂತೆ ಅನೇಕ ಖಾಸಗಿ ಕಂಪನಿಗಳು ಹೆಚ್ಚಿನ ಮಟ್ಟದಲ್ಲಿ ಬಿಜೆಪಿಗೆ ದೇಣಿಗೆ ನೀಡಿದೆ.

ಪ್ರಜಾಪ್ರಭುತ್ವ ಸುಧಾರಣೆ ಸಂಘ ನಡೆಸಿದ ಸಮೀಕ್ಷೆ ಪ್ರಕಾರ, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಖಾಸಗಿ ಕಂಪನಿಗಳಿಂದ ಬಿಜೆಪಿಗೆ ಸುಮಾರು ರು.157.84 ಕೋಟಿ ದೇಣಿಗೆ ಹರಿದು ಬಂದಿದೆ. 2013-2014ರಲ್ಲಿ ಬಿಜೆಪಿ ಚುನಾವಣೆ ಆಯೋಗ ನೀಡಿದ ಮಾಹಿತಿ ಪ್ರಕಾರ ಈ ಸಮೀಕ್ಷೆ ನಡೆಸಲಾಗಿದೆ.

ಸುಮಾರು 772 ವೈಯಕ್ತಿಕ ದೇಣಿಗೆದಾರರು ಪ್ರತ್ಯೇಕವಾಗಿ ರು, 20,000 ಸಾವಿರಕ್ಕೂ ಹೆಚ್ಚು ಹಣವನ್ನು ನೀಡಿದ್ದು, ಒಟ್ಟು ರು.12.99 ಕೋಟಿ ಸಂಗ್ರಹವಾಗಿದೆ.

ಭಾರತಿ ಗ್ರೂಪ್ಸ್‌ನ ಸತ್ಯ ಎಲೆಕ್ಟೋರಲ್ ಟ್ರಸ್ಟ್ ಗರಿಷ್ಠ ರು.41.37 ಕೋಟಿ ನೀಡಿದ್ದು, ಸ್ಟೆರ್ಲೈಟ್  ಇಂಡಸ್ಟ್ರೀಸ್ 15 ಕೋಟಿ ಹಾಗೂ ಕೈರ್ನ್ ಇಂಡಿಯಾ ಸಂಸ್ಥೆ 7.50 ಕೋಟಿ ದೇಣಿಗೆ ನೀಡಿದೆ.

ಅಲ್ಲದೇ, ಸತ್ಯ ಎಲೆಕ್ಟಾರಲ್ ಟ್ರಸ್ಟ್ ಕಾಂಗ್ರೆಸ್‌ಗೂ ಸುಮಾರು ರು.36.50 ಕೋಟಿ ದೇಣಿಗೆ ನೀಡಿದ್ದು, ಎನ್‌ಸಿಪಿಗೆ ರು.4 ಕೋಟಿ ದೇಣಿಗೆ ನೀಡಿದೆ.

ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ ಹಾಗೂ ಸಿಪಿಐಗೆ ಹಿಂದಿನ ವರ್ಷಕ್ಕಿಂತ ಚುನಾವಣೆ ವರ್ಷದಲ್ಲಿ ಹರಿದು ಬಂದ ದೇಣಿಗೆಯಲ್ಲಿ ಶೇ.158ರಷ್ಟು ಏರಿಕೆ ಕಂಡಿದೆ.

ಬಿಜೆಪಿಗೆ ಹರಿದು ಬಂದ ದೇಣಿಗೆಯಲ್ಲಿ ಶೇ.105ರಷ್ಟು ಏರಿಕೆ ಕಂಡಿದ್ದು, 2012-13ರಲ್ಲಿ 83.19 ಕೋಟಿ ಸಂಗ್ರಹವಾಗಿದ್ದು, 2014ರಲ್ಲಿ 170.86 ಕೋಟಿ ದೇಣಿಗೆ ಹರಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com