
ನವದೆಹಲಿ: ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ.
ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಮಂಗಳವಾರ ಲೋಕಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆ ಹಲವು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಅನಂತ ಕುಮಾರ್, ಈಗಾಗಲೇ ಅಡುಗೆ ಅನಿಲ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ಪಾವತಿಸುತ್ತಿರುವಂತೆ, ರೈತರ ಖಾತೆಗೂ ನೇರವಾಗಿ ರಸಗೊಬ್ಬರ ಸಬ್ಸಿಡಿ ಹಣ ಪಾವತಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಸಬ್ಸಿಡಿ ಹಣ ಪೊಲಾಗದಂತೆ ನೇರ ರೈತರಿಗೆ ತಲುಪಬೇಕೆಂಬುದು ಪ್ರಧಾನಿಯ ಆಶಯವಾಗಿದೆ ಎಂದಿದ್ದಾರೆ.
ಕೊರತೆ ಇಲ್ಲ: ರಾಷ್ಟ್ರದಲ್ಲಿ ಎಲ್ಲೂ ರಸಗೊಬ್ಬರ ಕೊರತೆ ಇಲ್ಲ. ಪ್ರತಿ ತಿಂಗಳು ಆಯಾ ರಾಜ್ಯಗಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಸಕಾಲದಲ್ಲಿ ತಲುಪಿಸಲಾಗಿದೆ. ನಮಗೆ ಯೂರಿಯಾ31 ದಶಲಕ್ಷಟನ್, ಡಿಎಪಿ, ಎಂಒಪಿ ಇತರೆ ರಸಗೊಬ್ಬರ 30 ದಶಲಕ್ಷ ಟನ್ ಅಗತ್ಯವಿದ್ದು ಅಷ್ಟನ್ನೂ ಒದಗಿಸಲಾಗಿದೆ. ಮಹಾರಾಷ್ಟ್ರ ಸೇರಿದಂತೆ ಯಾವ ರಾಜ್ಯಕ್ಕೂ ರಸಗೊಬ್ಬರ ಕೊರತೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement