ಭಾರತದಲ್ಲಿ ಇಸಿಸ್ ಗೆ ನಿಷೇಧ

ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಮೇಲೆ ಭಾರತ ನಿಷೇದಾಜ್ಞೆ ಜಾರಿ ಮಾಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಮೇಲೆ ಭಾರತ ನಿಷೇದಾಜ್ಞೆ ಜಾರಿ ಮಾಡಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅಡಿ ಇಸಿಸ್ ಉಗ್ರ ಸಂಘಟನೆ ಮೇಲೆ ಭಾರತ ನಿಷೇಧವೇರಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಿಂದ ಯುವಕರನ್ನು ಸೆಳೆದು ತನ್ನ ಸಂಘಟನೆಯ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ವಿಷಾಧ ವ್ಯಕ್ತಪಡಿಸಿರುವ ಭಾರತ ಉಗ್ರ ಸಂಘಟನೆ ಮೇಲೆ ನಿಷೇಧ ವೇರಿದೆ.

ಭಾರತ ಯುವಕರನ್ನು ತನ್ನತ್ತ ಸೆಳೆಯುವುದಲ್ಲದೇ, ಅದೇ ಯುವಕರನ್ನು ಮತ್ತೆ ಭಾರತಕ್ಕೆ ಕಳುಹಿಸಿ, ವಿಧ್ವಂಸಕ ಕೃತ್ಯ ಎಸಗುತ್ತಿದೆ. ವಿಧ್ವಂಸಕ ಕೃತ್ಯವೆಸಗಲು ತರಬೇತಿ ನೀಡಿ, ಮತ್ತೆ ಭಾರತಕ್ಕೆ ವಾಪಸ್ ಕಳುಹಿಸಿತ್ತಾರೆ. ಇದರಿಂದ ಭದ್ರತೆಗೆ ತೊಂBanದರೆಯಾಗುತ್ತಿರುವ ಹಿನ್ನಲೆಯಲ್ಲಿ ಭಾರತ ಈ ನಿರ್ಧಾರ ಕೈಗೊಂಡಿದೆ.

ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್, ಸಿರಿಯಾ ಡೈಶ್ ಸೇರಿದಂತೆ ಇತರೆ ಉಗ್ರಸಂಘಟನೆಗಳ ಮೇಲೆ ಭಾರತ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ ಅಡಿ ನಿಷೇದಾಜ್ಞೆ ಜಾರಿ ಮಾಡಿದೆ.

2014 ಮೇ ತಿಂಗಳಲ್ಲಿ ನಾಲ್ಕು ಯುವಕರು ಇರಾಕ್-ಸಿರಿಯಾದಲ್ಲಿರುವ ಇಸಿಸ್ ಉಗ್ರ ಸಂಘಟನೆ ಸೇರ್ಪಡೆಗೊಳ್ಳಲು ತೆರಳಿದ್ದರು. ಅದರಲ್ಲಿ ಓರ್ವ ಯುವಕ ವಾಪಸ್ಸಾಗಿದ್ದಾನೆ. ಇನ್ನುಳಿದ ಮೂವರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

ಬೆಂಗಳೂರು ಮೂಲದ ಎಂಎನ್ ಸಿ ಉದ್ಯೋಗಿ ಇಸಿಸ್ ಉಗ್ರ ಸಂಘಟನೆಗೆ ಉತ್ತೇಜನ ನೀಡುವಂತೆ ಟ್ವಿಟರ್ ಅಕೌಂಟ್ ತೆರೆದಿದ್ದನು. ಆತನನ್ನು ಬಂಧಿಸಲಾಗಿದೆ.

ಕಳೆದ ತಿಂಗಳಷ್ಟೇ ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳಲು ಹೊರಟಿದ್ದ ಯುವಕನನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಭಾರತದ ಯುವಕರನ್ನು ಸೆಳೆಯುತ್ತಿರುವ ಇಸಿಸ್ ಉಗ್ರ ಸಂಘಟನೆ ಮೇಲೆ ನಿಷೇಧವೇರುವ ಮೂಲಕ ಇಸಿಸ್ ಹಾವಳಿಯನ್ನು ತಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com