ಎನ್‌ಜಿಒಗಳಿಗೆ ಹರಿದು ಬಂದ ವಿದೇಶಿ ದೇಣಿಗೆ 11 ಸಾವಿರ ಕೋಟಿ!

2013-14 ಸಾಲಿನಲ್ಲಿ ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಗಳಿಗೆ ವಿದೇಶದಿಂದ ಹರಿದು ಬಂದ ದೇಣಿಗೆ ಬರೋಬ್ಬರಿ ರು. 11,070 ಕೋಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2013-14 ಸಾಲಿನಲ್ಲಿ ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಗಳಿಗೆ ವಿದೇಶದಿಂದ ಹರಿದು ಬಂದ ದೇಣಿಗೆ ಬರೋಬ್ಬರಿ ರು. 11,070 ಕೋಟಿ.

ಅಮೆರಿಕದಿಂದ ರು. 4,491 ಕೋಟಿ, ಲಂಡನ್‌ನಿಂದ ರು.1,347 ಕೋಟಿ ಸೇರಿದಂತೆ ಇತರೆ ದೇಶಗಳಿಂದ ಒಟ್ಟು 11 ಸಾವಿರ ಕೋಟಿ ದೇಣಿಗೆ ಹರಿದು ಬಂದಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

18 ಫೆಬ್ರವರಿ 2015ರೊಳಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಅಡಿ ಸುಮಾರು 43,050 ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಹೇಳಿದ್ದಾರೆ.

ಎನ್‌ಜಿಒಗಳು ವಿದೇಶಿ ದೇಣಿಗೆಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿವೆ ಎಂದು ಸರ್ಕಾರದ ಏಜೆನ್ಸಿಗಳು ಮತ್ತು ಇತರೆ ಸಂಘಟನೆಗಳು ದೂರು ದಾಖಲಿಸಿವೆ. ಇದರಲ್ಲಿ 24 ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಲಿದ್ದು, 10 ಪ್ರಕರಣಗಳ ಕುರಿತು ರಾಜ್ಯ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2006-07 ಮತ್ತು 2008-09ನೇ ಸಾಲಿನ ವಾರ್ಷಿಕ ವರದಿ ಸಲ್ಲಿಸದೇ ಇರುವ ಹಿನ್ನಲೆಯಲ್ಲಿ 2012ರಲ್ಲಿ ಎಫ್‌ಸಿಆರ್‌ಎ ಕಾಯ್ದೆ ಅಡಿ ಸುಮಾರು 4,138 ಎನ್‌ಜಿಒಗಳು ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ, ಯಾವ ಯಾವ ಎನ್‌ಜಿಒಗಳಿಗೆ ಎಲ್ಲೆಲ್ಲಿಂದ ದೇಣಿಗೆ ಹರಿದು ಬರುತ್ತಿದೆ ಎಂಬುದರ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಾಗಿದೆ.

ತಮಿಳುನಾಡಿಲ್ಲಿರುವ ಎನ್‌ಜಿಒಗಳಿಗೆ ರು. 1,751, ಆಂಧ್ರಪ್ರದೇಶ-ರು. 1,337, ಕರ್ನಾಟಕ-ರು. 1,322, ಹಾಗೂ ಮಹಾರಾಷ್ಟ-ರು. 1,292 ಕೋಟಿ ದೇಣಿಗೆ ಹರಿದು ಬಂದಿದೆ.

ವಿದೇಶಗಳಿಂದ ಹರಿದು ಬಂದ ದೇಣಿಗೆ ವಿವರ

  • 2013-14 ಸಾಲಿನಲ್ಲಿ ಯೆಮನ್ ಸಂಸ್ಥೆಯಿಂದ ಹರಿದು ಬಂದ ದೇಣಿಗೆ ರು. 5 ಕೋಟಿ
  • ನೇಪಾಳದಿಂದ 6 ಕೋಟಿ ಮತ್ತು ಬಾಂಗ್ಲಾದೇಶದಿಂದ ರು. 5.63 ಕೋಟಿ
  • ಉತ್ತರ ಕೋರಿಯಾ ದಿಂದ ರು.32 ಲಕ್ಷ ಹಾಗೂ ಮಲವಿಯಿಂದ ರು.27 ಲಕ್ಷ
  • ಬೊಸ್ನಿಯಾದಿಂದ ರು. 1.23 ಕೋಟಿ, ಆಫ್ಘಾನಿಸ್ತಾನದಿಂದ 1 ಕೋಟಿ
  • ಪಾಕಿಸ್ತಾನದಿಂದ 50 ಲಕ್ಷ ಮತ್ತು ಗ್ರೀಸ್‌ನಿಂದ 61 ಲಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com