ಗುಜರಾತ್ ಸರ್ಕಾರಿ ನೌಕರರಿಗೆ ಆರೆಸ್ಸೆಸ್ ಮುಕ್ತ

ಛತ್ತೀಸ್ ಗಡ ಸರ್ಕಾರ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗೆ ಪಾಲ್ಗೊಳ್ಳಲು ಅವಕಾಶ ನೀಡಿದೆ. ಇದೀಗ ಗುಜರಾತ್ ಸರ್ಕಾರ ಕೂಡ ಇಂಥದ್ದೇ ನಿರ್ಧಾರಕ್ಕೆ ಮುಂದಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಛತ್ತೀಸ್ ಗಡ ಸರ್ಕಾರ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗೆ ಪಾಲ್ಗೊಳ್ಳಲು ಅವಕಾಶ ನೀಡಿದೆ. ಇದೀಗ ಗುಜರಾತ್ ಸರ್ಕಾರ ಕೂಡ ಇಂಥದ್ದೇ ನಿರ್ಧಾರಕ್ಕೆ ಮುಂದಾಗಿದೆ.

ಈ ವಿಚಾರದಲ್ಲಿ ಛತ್ತೀಸ್ ಗಡಕ್ಕಿಂತ ಒಂದು ಹೆಜ್ಜೆ ಮುಂದಿಡಲು ನಿರ್ಧರಿಸಿರುವ ಗುಜರಾತ್ ಸರ್ಕಾರ ಆರೆಸ್ಸೆಸ್ ಸೇರಲೂ ಸರ್ಕಾರಿ ನೌಕರರಿಗೆ ಅವಕಾಶ ಮಾಡಿಕೊಡುವ ತೀರ್ಮಾನಕ್ಕೆ ಬಂದಿದೆ. ಸದ್ಯದಲ್ಲೇ ಈ ಕುರಿತ ಅಧಿಕೃತ ಆದೇಶ ಹೊರಬೀಳಲಿದೆ. ನಿಯಮದ ಪ್ರಕಾರ ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ಯಾವುದೇ ರಾಜಕೀಯ ಪಕ್ಷಗಳು ಅಥವಾ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳುವಂತಿಲ್ಲ.

ಈ ರೀತಿ ಯಾವ ರಾಜಕೀಯ ಸಂಘಟನೆಗಳ ಸದಸ್ಯರಾಗಬಾರದು ಎನ್ನುವ ಒಂದು ಪಟ್ಟಿಯೇ ಸರ್ಕಾರದ ಬಳಿ ಇದೆ. ಆ ಪಟ್ಟಿಯಲ್ಲಿ ಆರೆಸ್ಸೆಸ್ ಕೂಡ ಇದೆ. ಆದರೆ, ಆರೆಸ್ಸೆಸ್ ಒಂದು ರಾಜಕೀಯ ಸಂಘಟನೆ ಅಲ್ಲ ಎನ್ನುವ ವಾದ ಮುಂದಿಟ್ಟುಕೊಂಡು ಈಗ ಛತ್ತೀಸ್ ಗಡ ಮತ್ತು ಗುಜರಾತ್ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com