
ನವದೆಹಲಿ: `ನನ್ನ ಸರ್ಕಾರಕ್ಕಿರುವುದು ಒಂದೇ ಧರ್ಮ ಅದು `ಭಾರತವೇ ಮೊದಲು' ಎಂಬ ಪರಿಕಲ್ಪನೆ. ನನ್ನ ಸರ್ಕಾರಕ್ಕಿರುವುದು ಒಂದೇ ಧರ್ಮಗ್ರಂಥ ಅದುವೇ ಭಾರತದ ಸಂವಿಧಾನ.
ನಮ್ಮಲ್ಲಿರುವುದು ಒಂದೇ ಧರ್ಮನಿಷ್ಠೆ ಅದುವೇ `ಭಾರತ ಭಕ್ತಿ', ನಮ್ಮ ಏಕೈಕ ಪ್ರಾರ್ಥನೆ `ಎಲ್ಲರ ಶ್ರೇಯೋಭಿವೃದ್ಧಿ', ನನ್ನ ಸರ್ಕಾರಕ್ಕಿರುವುದು ಒಂದೇ ಕಾರ್ಯಶೈಲಿ ಅದು ಸಬ್ಕಾ ಸಾಥ್ ಸಬ್ಕಾ (ಎಲ್ಲರೊಂದಿಗೆ ಎಲ್ಲರ ವಿಕಾಸ).' ಇದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು. ಶುಕ್ರವಾರ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿದ ಪ್ರಧಾನಿ ಮೋದಿ ಲೋಕಸಭೆಯಲ್ಲಿ ತಮ್ಮ ಎಂದಿನ ಅದಮ್ಯ ಶೈಲಿಯಲ್ಲಿ ಮಾತನಾಡುತ್ತಿದ್ದರೆ, ಇಡೀ ಲೋಕಸಭೆಗೆ ಲೋಕಸಭೆಯೇ ಅವಕ್ಕಾಗಿ ನೋಡುತ್ತಿತ್ತು.
ಸರ್ಕಾರದ ಸಾಧನೆ, ಗುರಿಗಳನ್ನು ವಿವರಿಸುತ್ತಲೇ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳನ್ನೂ ತೀಕ್ಷ ್ಣವಾಗಿ ತರಾಟೆಗೆ ತೆಗೆದುಕೊಂಡರು. ನನ್ನ ಸರ್ಕಾರಕ್ಕಿರುವುದು `ಭಾರತವೇ ಮೊದಲು' ಎಂಬ ಏಕೈಕ ಧರ್ಮ ಎನ್ನುವ ಮೂಲಕ ಧಾರ್ಮಿಕ ಸಮಾನತೆ ಮತ್ತು ಸಹನೆಗೆ ಸರ್ಕಾರ ಬದ್ಧವಾಗಿದೆ ಎನ್ನುವುದನ್ನು ಪುನರುಚ್ಚರಿಸಿದರು. ಜತೆಗೆ, ಸರ್ಕಾರಕ್ಕಂಟಿರುವ `ಅಸಹಿಷ್ಣುತೆ'ಯ ಕಳಂಕವನ್ನು ತೊಡೆದುಹಾಕಲು ಯತ್ನಿಸಿದರು.
ನನ್ನ ಏಕೈಕ ಗುರಿಯೇ ದೇಶಕ್ಕಾಗಿ ಕೆಲಸ ಮಾಡುವುದು. ಭಾರತದ ಎಲ್ಲ 125 ಕೋಟಿ ಮಂದಿ ಕೈಜೋಡಿಸಿದರೆ ಮಾತ್ರವೇ ಅಭಿವೃದ್ಧಿ ಕನಸು ಸಾಕಾರಗೊಳ್ಳಲು ಸಾಧ್ಯ. ಧರ್ಮದ ಹೆಸರಲ್ಲಿ ತಾರತಮ್ಯ ಮಾಡುವ ಅಧಿಕಾರ ಯಾರಿಗೂ ಇಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಕೂಡ ಯಾರಿಗೂ ಇಲ್ಲ. ರಾಜಕೀಯ ಕಾರಣಗಳಿಗಾಗಿ ನಡೆದ ಕೋಮುವಾದ ದೇಶವನ್ನೇ ನಾಶಮಾಡಿದೆ.ಎಲ್ಲಕ್ಕಿಂತಲೂ ಮೇಲಿನದ್ದು ಭಾರತ ಮತ್ತು ಸಂವಿಧಾನ. ಕೇವಲ ಬಣ್ಣವು ಆಡಳಿತಕ್ಕೆ ಮಾರ್ಗದರ್ಶನ ನೀಡಲಾರದು, ತ್ರಿವರ್ಣ ಧ್ವಜವೇ ನಮಗೆ ನೈಜ ಮಾರ್ಗದರ್ಶಿ ಎಂದರು ಪ್ರಧಾನಿ ಮೋದಿ.
`ಭೂಸ್ವಾಧೀನ': ಪ್ರತಿಷ್ಠೆ ಬಿಟ್ಟು ಸಹಕಾರ ನೀಡಿ ಭೂಸ್ವಾಧೀನ ಸುಗ್ರೀವಾಜ್ಞೆ ಬಗ್ಗೆಯೂ ಮಾತನಾಡಿದ ಪ್ರಧಾನಿ, ಪ್ರತಿಪಕ್ಷ ಗಳು ರಾಜಕೀಯ ಮಾಡುವುದನ್ನು ಬಿಟ್ಟು ಸಹಕಾರ ನೀಡಿದರೆ ಪ್ರಸ್ತಾವಿತ ವಿಧೇಯಕದಲ್ಲಿ ಬದಲಾವಣೆ ತರಲು ಸಿದ್ದ ಎಂದರು. ಇದನ್ನು ಪ್ರತಿಷ್ಠೆಯ ವಿಷಯ ಎಂದು ನೋಡದೆಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದೂ ಹೇಳಿದರು.
ಕಾಂಗ್ರೆಸ್ ವೈಫಲ್ಯಕ್ಕೆ ಖಾತ್ರಿ ಜೀವಂತ ಸಾಕ್ಷಿ ನನ್ನಲ್ಲಿ ಎಲ್ಲರೂ ಕೇಳುತ್ತಾರೆ, ಯುಪಿಎ ಸರ್ಕಾರ ಜಾರಿ ಮಾಡಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಎನ್ಆರ್ ಜಿಎ)ಯನ್ನು ರದ್ದು ಮಾಡುತ್ತೀರಾ ಎಂದು. ನಾನೀಗ ಹೇಳಬಯಸುವುದೇನೆಂದರೆ, ನಾನೆಂದಿಗೂ ಈ ಯೋಜನೆ ರದ್ದು ಮಾಡುವುದಿಲ್ಲ. ಅದು ಯುಪಿಎ ಸರ್ಕಾರದ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿ ಮುಂದುವರಿಯಲಿ. ಅಷ್ಟೊಂದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ನೀವು(ಕಾಂಗ್ರೆಸ್), ಒಬ್ಬ ಬಡವನಿಗೆ ಕೊಡಲು ಸಾಧ್ಯವಾಗಿದ್ದು ತಿಂಗಳಿಗೆ ಕೆಲ ದಿನಗಳ ಕಾಲ ಚರಂಡಿ ತೋಡುವ ಕೆಲಸವಷ್ಟೇ.
ಹಾಗಾಗಿ ನಾನು ಯೋಜನೆ ಸ್ಥಗಿತಗೊಳಿಸಲ್ಲ. ಕನಿಷ್ಠ ಇದಕ್ಕಾದರೂ ನೀವು ನನ್ನನ್ನು ಹೊಗಳಬಹುದು ನಾನೊಬ್ಬ ರಾಜಕೀಯ ಚತುರ ಎಂದು. ಮೋದಿ ಇಂತಹ ತೀಕ್ಷ್ಣ ಮಾತುಗಳನ್ನು ಆಡುತ್ತಿದ್ದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮೌನವಾಗಿ ಪ್ರಧಾನಿಯ ಮುಖವನ್ನೇ ದಿಟ್ಟಿಸುತ್ತಿದ್ದರು. ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಬದಟಛಿ: ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ತರುವ ಉದ್ದೇಶವಿದೆ ಎಂದ ಮೋದಿ, ಇದು ಕೇವಲ ರಾಜಕೀಯ ಚರ್ಚೆಗೆ ಸೀಮಿತವಾಗುವುದು ಬೇಡ. ಇಲ್ಲದಿದ್ದರೆ, ಯಾರ ಬಟ್ಟೆ ಹೆಚ್ಚು ಶುಭ್ರವಾಗಿದೆ ಎನ್ನುವುದನ್ನೇ ನೋಡುತ್ತಾ ಕಾಲಕಳೆಯಬೇಕಾಗುತ್ತದೆ. ನಾವು ಆರೋಪ ಹೊರಿಸುವುದರಲ್ಲೇ ಮಗ್ನರಾದರೆ, ಹಣ ಮಾಡುವವರು ಮಾಡುತ್ತಾ ಇರುತ್ತಾರೆ ಎಂದರು.
Advertisement