ಉಗ್ರರನ್ನು ಹತ್ತಿಕ್ಕಲು ಭಾರತ ಅಡ್ಡಿ: ಪಾಕ್‌ ಸೇನಾ ಮುಖ್ಯಸ್ಥ ಆರೋಪ

ಗಡಿಯಲ್ಲಿ ಭಾರತ ಪದೇ ಪದೇ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂ ಸುತ್ತಿದ್ದು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಪಾಕ್‌ನ ಸೇನಾ...
ರಾಹಿಲ್‌ ಷರೀಫ್
ರಾಹಿಲ್‌ ಷರೀಫ್

ಇಸ್ಲಾಮಾಬಾದ್‌: ಗಡಿಯಲ್ಲಿ ಭಾರತ ಪದೇ ಪದೇ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂ ಸುತ್ತಿದ್ದು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಪಾಕ್‌ನ ಸೇನಾ ಮುಖ್ಯಸ್ಥ ರಾಹಿಲ್‌ ಷರೀಫ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಅವರ ಪಾಕಿಸ್ತಾನ ಭೇಟಿಗೂ ಮುನ್ನ,ಪಾಕ್‌ನ ಸೇನಾ ಮುಖ್ಯಸ್ಥ ರಾಹಿಲ್‌ ಷರೀಫ್ ಈ ಹೇಳಿಕೆ ನೀಡಿದ್ದು, ಶಾಂತಿ ಮಾತುಕತೆಗೆ ಅಡ್ಡಿ ಮಾಡುವ ಪ್ರಯತ್ನ ಎದ್ದು ಕಾಣುತ್ತಿದೆ.

ಇತ್ತೀಚೆಗೆ ಗಡಿಯಲ್ಲಿ ಭಾರತದ ಸೇನಾ ಪಡೆ ಪದೇ ಪದೇ ಗುಂಡಿನ ದಾಳಿ ನಡೆಸುತ್ತಿದೆ. ಭಾರತ ಈ ದಾಳಿಯನ್ನು ಮುಂದುವರೆಸಿದರೆ, ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಾಹಿಲ್‌ ಷರೀಫ್ ಹೇಳಿದ್ದಾರೆ.

ಉಗ್ರರ ವಿರುದ್ಧ ಹೋರಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಅಡ್ಡಿ ಉಂಟು ಮಾಡುತ್ತಿವೆ ಎಂದು ಷರೀಫ್ ಹೇಳಿದ ಬೆನ್ನಲ್ಲೇ ಪಾಕ್ ಸೇನಾ ಪಡೆ ಭಾರತದ ಸೇನಾ ಪಡೆ ಮೇಲೆ ಗುರುವಾರ ರಾತ್ರಿ ಗುಂಡು ಹಾರಿಸಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com