ಒಂದೇ ಧರ್ಮ, ಅದು ಭಾರತ

ಪ್ರಧಾನಿ ಮೋದಿ ಅವರ ವಾಕ್ ಚಾತುರ್ಯ ಲೋಕಸಭೆಯಲ್ಲೂ ಶುಕ್ರವಾರ ಪ್ರತಿಧ್ವನಿಸಿತು. ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿದ...
ಸಂಸತ್ ನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಸಂಸತ್ ನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
Updated on

ಪ್ರಧಾನಿ ಮೋದಿ ಅವರ ವಾಕ್ ಚಾತುರ್ಯ ಲೋಕಸಭೆಯಲ್ಲೂ ಶುಕ್ರವಾರ ಪ್ರತಿಧ್ವನಿಸಿತು. ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿದ ಪ್ರಧಾನಿ ಮೋದಿ, ತಮ್ಮ  ಮಾತಿನ ಮೂಲಕ ಎಲ್ಲರನ್ನೂ ಮಂತ್ರಮುಗಟಛಿಗೊಳಿಸಿದರು. ಸರ್ಕಾರದ ಸಾಧನೆ, ಗುರಿಗಳನ್ನು ವಿವರಿಸುತ್ತಲೇ ಮೋದಿ, ಪ್ರತಿಪಕ್ಷಗಳನ್ನೂ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡರು.

ಭಾರತದ ಸಂವಿಧಾನವೇ ಧರ್ಮಗ್ರಂಥ `ನನ್ನ ಸರ್ಕಾರಕ್ಕಿರುವುದು ಒಂದೇ ಧರ್ಮ- ಅದು `ಭಾರತವೇ ಮೊದಲು'. ನನ್ನ ಸರ್ಕಾರಕ್ಕಿರುವುದು ಒಂದೇ ಧರ್ಮಗ್ರಂಥ- ಅದುವೇ ಭಾರತದ ಸಂವಿಧಾನ. ನಮ್ಮಲ್ಲಿರುವುದು ಒಂದೇ ಧರ್ಮನಿಷ್ಠೆ- ಅದುವೇ `ಭಾರತ ಭಕ್ತಿ', ನಮ್ಮ ಏಕೈಕ ಪ್ರಾರ್ಥನೆ `ಎಲ್ಲರ ಶ್ರೇಯೋಭಿವೃದ್ಧಿ', ನನ್ನ ಸರ್ಕಾರಕ್ಕಿರುವುದು ಒಂದೇ ಕಾರ್ಯಶೈಲಿ- ಅದು ಸಬ್ಕಾ ಸಾಥ್ ಸಬ್ಕಾ ವಿಕಾಸ್ (ಎಲ್ಲರೊಂದಿಗೆ ಎಲ್ಲರ ವಿಕಾಸ).'

ಭಾರತದ ಎಲ್ಲ 125 ಕೋಟಿ ಮಂದಿ ಕೈಜೋಡಿಸಿದರೆ ಮಾತ್ರವೇ ಅಬಿsವೃದಿಟಛಿಯ ಕನಸು ಸಾಕಾರಗೊಳ್ಳಲು ಸಾಧ್ಯ. ರಾಜಕೀಯ ಕಾರಣಗಳಿಗಾಗಿ ನಡೆದ ಕೋಮುವಾದ
ದೇಶವನ್ನೇ ನಾಶಮಾಡಿದೆ. ಹೃದಯಗಳು ಒಡೆದಿವೆ. ನಮಗೆ ಬೇಕಾಗಿರುವುದು ಎಲ್ಲ ಧರ್ಮಗಳ ಅಭ್ಯುದಯ. ಎಲ್ಲಕ್ಕಿಂತಲೂ ಮೇಲಿನದ್ದು ಭಾರತ ಮತ್ತು ಸಂವಿಧಾನ. ನನಗೆ ಕಾಣುವುದು ತ್ರಿವರ್ಣಗಳು ಮಾತ್ರ, ಬೇರಾವುದೇ ಬಣ್ಣವಲ್ಲ. ಕೇವಲ ಬಣ್ಣವು ಆಡಳಿತಕ್ಕೆ ಮಾರ್ಗದರ್ಶನ ನೀಡಲಾರದು, ತ್ರಿವರ್ಣ ಧ್ವಜವೇ ನಮಗೆ ನೈಜ ಮಾರ್ಗದರ್ಶಿ.

ಭಾರತದ ಪ್ರತಿಯೊಬ್ಬ ನಾಗರಿಕನೂ ಪರಸ್ಪರ ಕೈಜೋಡಿಸಿ ಮಗ್ನರಾದರೆ, ಹಣ ಮಾಡುವವರು ಮಾಡುತ್ತಾ ಇರುತ್ತಾರೆ. ಭಯೋತ್ಪಾದನೆ ಮತ್ತು ಬಡತನದ ವಿರುದ್ಧ ಹೋರಾಡಬೇಕು.

ಸಂಸತ್‍ನಲ್ಲಿ ಪ್ರಧಾನಿ ಪ್ರಬಲ ಭಾಷಣ

ನೀವು ಎಲ್ಲದಕ್ಕೂ ನನ್ನನ್ನು ಟೀಕಿಸಬಹುದು, ಪ್ರಶ್ನಿಸಬಹುದು. ಆದರೆ, ನಾನೊಬ್ಬ ಉತ್ತಮ ರಾಜಕಾರಣಿ ಎಂದು ಒಪ್ಪಲೇಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಾನು ರದ್ದು ಮಾಡುವುದಿಲ್ಲ. ಅದು ಯುಪಿಎ ಸರ್ಕಾರದ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿ ಮುಂದುವರಿಯಲಿ. ಅಷ್ಟೊಂದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ನೀವು(ಕಾಂಗ್ರೆಸ್), ಒಬ್ಬ ಬಡವನಿಗೆ ಕೊಡಲು ಸಾಧ್ಯವಾಗಿದ್ದು, ತಿಂಗಳಿಗೆ ಕೆಲ ದಿನಗಳ ಕಾಲ ಚರಂಡಿ ತೋಡುವ ಕೆಲಸವನ್ನಷ್ಟೇ.

ಭೂಸ್ವಾಧೀನ ವಿಧೇಯಕ ಕುರಿತು ರಾಜಕೀಯ ಮಾಡುವುದನ್ನು ಬಿಟ್ಟು ಸರ್ಕಾರಕ್ಕೆ ಸಹಕಾರ ನೀಡಿ. ಇದನ್ನು ಪ್ರತಿಷ್ಠೆಯ ವಿಷಯ ಎಂದು ನೋಡಬೇಡಿ. 1894ರ ಕಾನೂನಿನ ಪ್ರಕಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿತ್ತು. ಹಾಗಾದರೆ ಕಾಂಗ್ರೆಸ್‍ಗೆ ರೈತರ ಕಷ್ಟಗಳು 2013ರ ನಂತರವೇ ಕಂಡಿದ್ದಾ? ಕಪ್ಪುಹಣ ಹೊಂದಿರುವ ಯಾರನ್ನೂ ಬಿಡುವುದಿಲ್ಲ. ಪ್ರತೀಕಾರ ತೀರಿಸುತ್ತಿದ್ದೇವೆ ಎಂದು ಯಾರೂ ಭಾವಿಸುವುದು ಬೇಡ. ಆಶ್ವಾಸನೆ ನೀಡಿದ್ದೇವೆ, ಅದನ್ನು ಈಡೇರಿಸಿಯೇ ತೀರುತ್ತೇವೆ. ಭ್ರಷ್ಟ ಮುಕ್ತ ವ್ಯವಸ್ಥೆಯೇ ನಮ್ಮ ಗುರಿ. ಇದು ರಾಜಕೀಯ ಚರ್ಚೆಗೆ ಸೀಮಿತವಾಗುವುದು ಬೇಡ. ನಾವು ಆರೋಪದಲ್ಲೇ ಮಗ್ನರಾದರೆ, ಹಣ ಮಾಡುವವರು ಮಾಡುತ್ತಾ ಇರುತ್ತಾರೆ.

ದೇಶವು ಹುಟ್ಟಿದ್ದೇ 1947ರಲ್ಲಿ ಎಂದು ನಾವು ಭಾವಿಸಬಾರದು. ಇದು ಸಾವಿರಾರು ವರ್ಷಗಳಿಂದಲೂ ಇರುವಂತಹ ದೇಶ. ಸಿದ್ದಾಂತಗಳು ಬರುತ್ತವೆ, ಹೋಗುತ್ತವೆ, ಸರ್ಕಾರಗಳು ಬರುತ್ತವೆ, ಹೋಗುತ್ತವೆ. ದೇಶಗಳು ಅವುಗಳ ತತ್ವದಿಂದ ನಿರ್ಮಿತವಾದವು. ಭಾರತದ ಮೂಲ ಸಿದ್ದಾಂತವೇ ಎಲ್ಲರ ಶ್ರೇಯಸ್ಸು.
-ನರೇಂದ್ರ ಮೋದಿ, ಪ್ರಧಾನಿ

ಪ್ರಧಾನಿ ಭಾಷಣ ಚೆನ್ನಾಗಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಮಾತುಗಳು ಖಾಲಿ ಹೊಟ್ಟೆಯನ್ನು ತುಂಬಿಸಲಾರವು. ಪ್ರತಿಪಕ್ಷಗಳನ್ನು ಟೀಕಿಸಲು `ಉದ್ಯೋಗ ಖಾತ್ರಿ
ಯೋಜನೆ'ಯ ಹೆಸರು ಬಳಸಬಾರದಿತ್ತು. ಅವರು ಹೇಳುವುದೇ ಸರಿಯಾದರೆ, ಮೋದಿ ಅವರು ಸಿಎಂ ಆಗಿದ್ದರೂ ಗುಜರಾತ್ ಬಡ ರಾಜ್ಯವಾಗಿ ಉಳಿದಿದ್ದೇಕೆ?
-ಮಲ್ಲಿಕಾರ್ಜುನ ಖರ್ಗೆ,
ಲೋಕಸಭೆ ಕಾಂಗ್ರೆಸ್ ನಾಯಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com