

ನವದೆಹಲಿ: ಕೇಂದ್ರ ಸಚಿವರ ಆಸ್ತಿ ವಿವರಗಳು ಪ್ರಧಾನಿಮಂತ್ರಿಗಳ ಕಾರ್ಯಾಲಯದ ವೆಬ್ಸೈಟ್ಗೆ ಅಪ್ಲೋಡ್ ಆದ ಮರುದಿನವೇ ಸಾರ್ವಜನಿಕರ ವೀಕ್ಷ ಣೆಗೆ ಸಿಗದಂತಾಗಿದೆ. ಆದರೆ, ಪ್ರಧಾನಿ ಕಾರ್ಯಾಲಯ ಮಾ ತ್ರ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದೆ. ಪ್ರಧಾನಿ ಕಾರ್ಯಾಲಯದ ಸೈಟ್ ಅನ್ನು ಹೊಸ ಸರ್ವರ್ಗಳಿಗೆ ವರ್ಗಾವಣೆ ಮಾಡುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆ ಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಇದೊಂದು ತಾತ್ಕಾಲಿಕ ಸಮಸ್ಯೆ. ಸದ್ಯದಲ್ಲೇ ಇದು ಪರಿಹಾರವಾಗಲಿದೆ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.