ಶೌಚಾಲಯ ಬಳಕೆಗೆ ಮೊಬೈಲ್ ಕಣ್ಗಾವಲು

ಶೌಚಾಲಯಗಳ ನಿರ್ಮಾಣ ಆಯ್ತು ಇನ್ನು ಆ ಶೌಚಾಲಯಗಳ ಸರಿಯಾದ ಬಳಕೆ...
ಶೌಚಾಲಯ (ಸಾಂದರ್ಭಿಕ ಚಿತ್ರ )
ಶೌಚಾಲಯ (ಸಾಂದರ್ಭಿಕ ಚಿತ್ರ )

ನವದೆಹಲಿ: ಶೌಚಾಲಯಗಳ ನಿರ್ಮಾಣ ಆಯ್ತ...ಇನ್ನು ಆ ಶೌಚಾಲಯಗಳ ಸರಿಯಾದ ಬಳಕೆ ಆಗುತ್ತಿದೆಯೇ ಎನ್ನುವ ಕುರಿತೂ ಸರ್ಕಾರ ಪರಿಶೀಲನೆ ನಡೆಸಲು ನಿರ್ಧರಿಸಿದೆ. ಅದರಂತೆ ಗುರುವಾರದಿಂದ ದೇಶಾದ್ಯಂತ ಶೌಚಾಲಯಗಳ ಬಳಕೆ ಸರ್ಕಾರ ಕಣ್ಗಾವಲು ಇಡಲಿದೆ.

2019 ರ ವೇಳೆಗೆ ಬಯಲು ಶೌಚಕ್ಕೆ ಸಂಪೂರ್ಣ ಅಂತ್ಯ ಹಾಡಬೇಕು ಎನ್ನುವ ಗುರಿ ಈಡೇರಿಕೆಗೆ ಸರ್ಕಾರ ಇಂಥದ್ದೊಂದು ಕಾರ್ಯ ಆರಂಭಿಸಿದೆ. ಅದರಂತೆ ಐಪಾಡ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಫೋನ್ ಗಳನ್ನು  ಬಳಸಿಕೊಂಡು ಅಧಿಕಾರಿಗಳು ಕೇಂದ್ರ ಕುಡಿಯುವ  ನೀರು ಮತ್ತು ನೈರ್ಮಲ್ಯ ಸಚಿವಾಲಯಕ್ಕೆ ಈ ಕುರಿತು ಮಾಹಿತಿ ನೀಡಲಿದ್ದಾರೆ.

ಈ ಹಿಂದೆ ಸರ್ಕಾರ ಶೌಚಾಲಯಗಳ ನಿರ್ಮಾಣದ ಕುರಿತಷ್ಟೇ ಪರಿಶೀಲನೆ ನಡೆಸುತ್ತದೆ ಎಂದು ಹೇಳಲಾಗಿತ್ತು. ಆದರೆ ಶೌಚಾಲಯಗಳನ್ನು  ಕಟ್ಟಿದರಷ್ಟೇ ಸಾಲದು, ಅದರ ಸದ್ಬಳಕೆ ಆಗುತ್ತಿದೆಯೋ, ಇಲ್ಲವೋ ಎನ್ನುವುದಕ್ಕೂ ಗಮನಕೊಡಬೇಕು. ಈ ರೀತಿ ಮಾಡಿದಾಗಷ್ಟೇ ಬಯಲು ಶೌಚಕ್ಕೆ ಮುಕ್ತಿ ಹಾಡಲು ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿಲುವು ತೆಗೆದುಕೊಂಡಿದೆ.

ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯ ಭಾಗವಾಗಿ ಬಯಲು ಶೌಚಾಲಯಕ್ಕೆ ಅಂತ್ಯ ಹಾಡಲು ಸರ್ಕಾರ ರು. 2 ಲಕ್ಷ ಕೋಟಿಯ ಯೋಜನೆಯನ್ನು ಸರ್ಕಾರ  ಘೋಷಿಸಿದೆ. ಈ ಮೂಲಕ ಸರ್ಕಾರ ದೇಶಾದ್ಯಂತ ಸಾವಿರಾರು ಶೌಚಾಲಯಗಳನ್ನು ನಿರ್ಮಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com